-
ಮಾರ್ಕ 14:60-65ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
60 ಆಗ ಮಹಾ ಪುರೋಹಿತ ಎದ್ದುನಿಂತು ಯೇಸುಗೆ “ಇದ್ರ ಬಗ್ಗೆ ನೀನು ಏನೂ ಹೇಳಲ್ವಾ? ನಿನ್ನ ವಿರುದ್ಧ ಇವರು ಸಾಕ್ಷಿ ಹೇಳ್ತಿರೋದು ನಿನಗೆ ಕೇಳಿಸ್ತಿಲ್ವಾ?” ಅಂತ ಕೇಳಿದ.+ 61 ಆದ್ರೆ ಯೇಸು ಸುಮ್ಮನಿದ್ದನು. ಏನೂ ಉತ್ರ ಕೊಡಲಿಲ್ಲ.+ ಆಗ ಮಹಾ ಪುರೋಹಿತ ಮತ್ತೆ “ನೀನು ಪವಿತ್ರ ದೇವರ ಮಗನಾದ ಕ್ರಿಸ್ತನಾ?” ಅಂತ ಕೇಳಿದ. 62 ಅದಕ್ಕೆ ಯೇಸು “ಹೌದು. ಮನುಷ್ಯಕುಮಾರ+ ಸರ್ವಶಕ್ತನ ಬಲಗಡೆಯಲ್ಲಿ+ ಕೂತಿರೋದನ್ನ, ಮೋಡಗಳ ಮೇಲೆ ಬರೋದನ್ನ ನೀವು ನೋಡ್ತೀರ” ಅಂದನು.+ 63 ಇದನ್ನ ಕೇಳಿ ಮಹಾ ಪುರೋಹಿತ ತನ್ನ ಬಟ್ಟೆ ಹರ್ಕೊಂಡು “ಇದಕ್ಕಿಂತ ನಮಗೆ ಬೇರೆ ಸಾಕ್ಷಿ ಬೇಕಾ?+ 64 ದೇವರ ವಿರುದ್ಧ ಮಾತಾಡಿದ್ದನ್ನ ನೀವೇ ಕೇಳಿಸ್ಕೊಂಡ್ರಿ. ನಿಮ್ಮ ತೀರ್ಮಾನ ಏನು?” ಅಂದ. ಆಗ ಅವ್ರೆಲ್ಲ ಯೇಸುಗೆ ಮರಣಶಿಕ್ಷೆ ಆಗ್ಲೇಬೇಕು ಅಂದ್ರು.+ 65 ಆಮೇಲೆ ಕೆಲವರು ಆತನ ಮುಖಕ್ಕೆ ಉಗುಳಿದ್ರು.+ ಮುಖಕ್ಕೆ ಮುಸುಕು ಹಾಕಿ ಗುದ್ದಿ “ನಿನ್ನನ್ನ ಯಾರು ಹೊಡೆದ್ರು ಅಂತ ಹೇಳು ನೋಡೋಣ!” ಅಂದ್ರು. ಆಮೇಲೆ ನ್ಯಾಯಸಭೆಯ ಸೇವಕರು ಆತನ ಕೆನ್ನೆಗೆ ಹೊಡೆದು ಅಲ್ಲಿಂದ ಕರ್ಕೊಂಡು ಹೋದ್ರು.+
-