ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದಾನಿಯೇಲ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ದಾನಿಯೇಲ ಮುಖ್ಯಾಂಶಗಳು

      • ರಾಜ ಬೇಲ್ಶಚ್ಚರ ಮಾಡಿದ ಔತಣ (1-4)

      • ಗೋಡೆ ಮೇಲಿನ ಬರಹ (5-12)

      • ಆ ಬರಹದ ಅರ್ಥ ಹೇಳೋಕೆ ದಾನಿಯೇಲನನ್ನ ಕೇಳ್ಕೊಂಡ (13-25)

      • ಅರ್ಥ: ಬಾಬೆಲಿನ ನಾಶನ (26-31)

ದಾನಿಯೇಲ 5:1

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:1; 8:1
  • +ಯೆಶಾ 21:5; ಯೆರೆ 51:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 15-16, 22-23, 100-101

ದಾನಿಯೇಲ 5:2

ಮಾರ್ಜಿನಲ್ ರೆಫರೆನ್ಸ್

  • +2ಅರ 25:15; 2ಪೂರ್ವ 36:18; ಎಜ್ರ 1:7; ಯೆರೆ 52:19; ದಾನಿ 1:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 101

ದಾನಿಯೇಲ 5:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 22-23, 101-102

ದಾನಿಯೇಲ 5:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 101-102

ದಾನಿಯೇಲ 5:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 102

ದಾನಿಯೇಲ 5:6

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 21:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 102-104

ದಾನಿಯೇಲ 5:7

ಪಾದಟಿಪ್ಪಣಿ

  • *

    ಅದು, ಕಣಿ ಹೇಳೋದ್ರಲ್ಲಿ, ಮತ್ತು ಜ್ಯೋತಿಷದಲ್ಲಿ ನಿಪುಣರಾಗಿರೋ ಒಂದು ಗುಂಪು.

  • *

    ಈ ಬಣ್ಣ ರಾಜಪದವಿಯನ್ನ, ಶ್ರೀಮಂತಿಕೆಯನ್ನ, ಗೌರವವನ್ನ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:2; 4:6
  • +ಆದಿ 41:39, 42; ಎಸ್ತೇ 8:15
  • +ದಾನಿ 2:6, 48

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 16-17, 104

ದಾನಿಯೇಲ 5:8

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:27; 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 104-105

ದಾನಿಯೇಲ 5:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 13:1, 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 105

ದಾನಿಯೇಲ 5:10

ಪಾದಟಿಪ್ಪಣಿ

  • *

    ಬಹುಶಃ ಇದು ರಾಜನ ತಾಯಿ ಇರಬೇಕು.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 106

ದಾನಿಯೇಲ 5:11

ಪಾದಟಿಪ್ಪಣಿ

  • *

    ಅಥವಾ “ಸಮರ್ಥ ವ್ಯಕ್ತಿ.”

  • *

    ಅಕ್ಷ. “ಒಳನೋಟ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:8, 9
  • +ದಾನಿ 2:47, 48

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 106

ದಾನಿಯೇಲ 5:12

ಪಾದಟಿಪ್ಪಣಿ

  • *

    ಅಕ್ಷ. “ಗಂಟು ಬಿಡಿಸೋಕೆ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 1:7; 4:8
  • +ದಾನಿ 1:17, 20; 6:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 106

ದಾನಿಯೇಲ 5:13

ಮಾರ್ಜಿನಲ್ ರೆಫರೆನ್ಸ್

  • +2ಅರ 24:11, 14; ದಾನಿ 1:3, 6; 2:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2016, ಪು. 14

    ದಾನಿಯೇಲನ ಪ್ರವಾದನೆ, ಪು. 106-107

ದಾನಿಯೇಲ 5:14

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:9
  • +ದಾನಿ 1:17, 20

ದಾನಿಯೇಲ 5:15

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 47:12, 13; ದಾನಿ 2:10, 11; 5:8

ದಾನಿಯೇಲ 5:16

ಪಾದಟಿಪ್ಪಣಿ

  • *

    ಅಕ್ಷ. “ಗಂಟು ಬಿಡಿಸ್ತೀಯ.”

  • *

    ಈ ಬಣ್ಣ ರಾಜಪದವಿಯನ್ನ, ಶ್ರೀಮಂತಿಕೆಯನ್ನ, ಗೌರವವನ್ನ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:28
  • +ದಾನಿ 2:6; 5:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 106-107

ದಾನಿಯೇಲ 5:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 106-107

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    9/2017, ಪು. 2

ದಾನಿಯೇಲ 5:18

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:37, 38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 15-17

ದಾನಿಯೇಲ 5:19

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:9; ದಾನಿ 3:4, 5; 4:22
  • +ದಾನಿ 2:12; 3:6, 29

ದಾನಿಯೇಲ 5:20

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 14:13, 14; ದಾನಿ 4:30

ದಾನಿಯೇಲ 5:21

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:31-35

ದಾನಿಯೇಲ 5:23

ಮಾರ್ಜಿನಲ್ ರೆಫರೆನ್ಸ್

  • +ಯೆರೆ 50:29
  • +ದಾನಿ 5:2, 3
  • +ಕೀರ್ತ 115:4-7; ಯೆಶಾ 46:6, 7
  • +ಕೀರ್ತ 104:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 22-23, 107-108

ದಾನಿಯೇಲ 5:24

ಮಾರ್ಜಿನಲ್ ರೆಫರೆನ್ಸ್

  • +ದಾನಿ 5:5

ದಾನಿಯೇಲ 5:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 108

ದಾನಿಯೇಲ 5:26

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 13:11; ಯೆರೆ 25:12; 27:6, 7; 50:1, 2; 51:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 108

ದಾನಿಯೇಲ 5:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 109

ದಾನಿಯೇಲ 5:28

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 1:1, 2; ಯೆಶಾ 21:2; 45:1; ಯೆರೆ 50:9; ದಾನಿ 6:28; 9:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 109

ದಾನಿಯೇಲ 5:29

ಪಾದಟಿಪ್ಪಣಿ

  • *

    ಈ ಬಣ್ಣ ರಾಜಪದವಿಯನ್ನ, ಶ್ರೀಮಂತಿಕೆಯನ್ನ, ಗೌರವವನ್ನ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ದಾನಿ 5:7, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 109-110

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    9/2017, ಪು. 2

ದಾನಿಯೇಲ 5:30

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 21:9; ಯೆರೆ 51:8, 31, 39, 57

ದಾನಿಯೇಲ 5:31

ಮಾರ್ಜಿನಲ್ ರೆಫರೆನ್ಸ್

  • +ದಾನಿ 6:1; 9:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 6/2017, ಪು. 1

    ದಾನಿಯೇಲನ ಪ್ರವಾದನೆ, ಪು. 17-18

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ದಾನಿ. 5:1ದಾನಿ 7:1; 8:1
ದಾನಿ. 5:1ಯೆಶಾ 21:5; ಯೆರೆ 51:39
ದಾನಿ. 5:22ಅರ 25:15; 2ಪೂರ್ವ 36:18; ಎಜ್ರ 1:7; ಯೆರೆ 52:19; ದಾನಿ 1:1, 2
ದಾನಿ. 5:6ಯೆಶಾ 21:2, 3
ದಾನಿ. 5:7ದಾನಿ 2:2; 4:6
ದಾನಿ. 5:7ಆದಿ 41:39, 42; ಎಸ್ತೇ 8:15
ದಾನಿ. 5:7ದಾನಿ 2:6, 48
ದಾನಿ. 5:8ದಾನಿ 2:27; 4:7
ದಾನಿ. 5:9ಯೆಶಾ 13:1, 7
ದಾನಿ. 5:11ದಾನಿ 4:8, 9
ದಾನಿ. 5:11ದಾನಿ 2:47, 48
ದಾನಿ. 5:12ದಾನಿ 1:7; 4:8
ದಾನಿ. 5:12ದಾನಿ 1:17, 20; 6:3
ದಾನಿ. 5:132ಅರ 24:11, 14; ದಾನಿ 1:3, 6; 2:25
ದಾನಿ. 5:14ದಾನಿ 4:9
ದಾನಿ. 5:14ದಾನಿ 1:17, 20
ದಾನಿ. 5:15ಯೆಶಾ 47:12, 13; ದಾನಿ 2:10, 11; 5:8
ದಾನಿ. 5:16ದಾನಿ 2:28
ದಾನಿ. 5:16ದಾನಿ 2:6; 5:7
ದಾನಿ. 5:18ದಾನಿ 2:37, 38
ದಾನಿ. 5:19ಯೆರೆ 25:9; ದಾನಿ 3:4, 5; 4:22
ದಾನಿ. 5:19ದಾನಿ 2:12; 3:6, 29
ದಾನಿ. 5:20ಯೆಶಾ 14:13, 14; ದಾನಿ 4:30
ದಾನಿ. 5:21ದಾನಿ 4:31-35
ದಾನಿ. 5:23ಯೆರೆ 50:29
ದಾನಿ. 5:23ದಾನಿ 5:2, 3
ದಾನಿ. 5:23ಕೀರ್ತ 115:4-7; ಯೆಶಾ 46:6, 7
ದಾನಿ. 5:23ಕೀರ್ತ 104:29
ದಾನಿ. 5:24ದಾನಿ 5:5
ದಾನಿ. 5:26ಯೆಶಾ 13:11; ಯೆರೆ 25:12; 27:6, 7; 50:1, 2; 51:11
ದಾನಿ. 5:28ಎಜ್ರ 1:1, 2; ಯೆಶಾ 21:2; 45:1; ಯೆರೆ 50:9; ದಾನಿ 6:28; 9:1
ದಾನಿ. 5:29ದಾನಿ 5:7, 16
ದಾನಿ. 5:30ಯೆಶಾ 21:9; ಯೆರೆ 51:8, 31, 39, 57
ದಾನಿ. 5:31ದಾನಿ 6:1; 9:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ದಾನಿಯೇಲ 5:1-31

ದಾನಿಯೇಲ

5 ಒಮ್ಮೆ ರಾಜ ಬೇಲ್ಶಚ್ಚರ+ ತನ್ನ ಸಾವಿರ ಪ್ರಧಾನರಿಗಾಗಿ ಒಂದು ದೊಡ್ಡ ಔತಣ ಮಾಡಿದ. ಅವನು ಅವ್ರ ಮುಂದೆ ದ್ರಾಕ್ಷಾಮದ್ಯ ಕುಡಿದ.+ 2 ದ್ರಾಕ್ಷಾಮದ್ಯದ ಮತ್ತಲ್ಲಿದ್ದ ಬೇಲ್ಶಚ್ಚರ ಯೆರೂಸಲೇಮ್‌ ದೇವಾಲಯದಿಂದ ಅವನ ಅಪ್ಪ ನೆಬೂಕದ್ನೆಚ್ಚರ ತಂದಿದ್ದ ಚಿನ್ನ, ಬೆಳ್ಳಿಯ ಪಾತ್ರೆಗಳನ್ನ ತನ್ನ ಮುಂದೆ ತರೋಕೆ ಹೇಳಿದ.+ ಅವನು, ಅವನ ಪ್ರಧಾನರು, ಅವನ ಉಪಪತ್ನಿಯರು, ಬೇರೆ ಪತ್ನಿಯರು ಆ ಪಾತ್ರೆಗಳಲ್ಲಿ ದ್ರಾಕ್ಷಾಮದ್ಯ ಕುಡಿಯೋಕೆ ಅದನ್ನ ತರಿಸಿದ. 3 ಯೆರೂಸಲೇಮ್‌ ದೇವಾಲಯದಿಂದ ತಗೊಂಡು ಬಂದಿದ್ದ ಚಿನ್ನದ ಪಾತ್ರೆಗಳನ್ನ ಅವರು ತಂದ್ರು. ರಾಜ, ಅವನ ಪ್ರಧಾನರು, ಅವನ ಉಪಪತ್ನಿಯರು, ಬೇರೆ ಪತ್ನಿಯರು ಆ ಪಾತ್ರೆಗಳಲ್ಲಿ ದ್ರಾಕ್ಷಾಮದ್ಯ ಕುಡಿದ್ರು. 4 ಕುಡಿದು ಅವರು ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಮರ, ಕಲ್ಲಿನ ದೇವರುಗಳನ್ನ ಕೊಂಡಾಡಿದ್ರು.

5 ಕೂಡ್ಲೇ ಅಲ್ಲಿ ಮನುಷ್ಯನ ಕೈಯೊಂದು ಕಾಣಿಸ್ತು. ಅದ್ರ ಬೆರಳುಗಳು ದೀಪಸ್ತಂಭದ ಮುಂದೆ ಅರಮನೆಯ ಗೋಡೆ ಮೇಲೆ ಬರಿಯೋಕೆ ಶುರು ಮಾಡ್ತು. ಆ ಕೈ ಗೋಡೆ ಮೇಲೆ ಬರಿಯೋದನ್ನ ರಾಜ ನೋಡಿದ. 6 ಆಗ ರಾಜನ ಮುಖ ಬಿಳಿಚ್ಕೊಂಡಿತು, ಏನೋ ನೆನಸ್ಕೊಂಡು ಭಯಪಟ್ಟ. ಅವನ ಸೊಂಟ ನಡುಗ್ತು.+ ಅವನ ಮಂಡಿಗಳು ಒಂದಕ್ಕೊಂದು ಬಡಿಯೋಕೆ ಶುರು ಆಯ್ತು.

7 ಆಗ ರಾಜ ಗಟ್ಟಿಯಾಗಿ ಕೂಗಿ ಮಾಟಗಾರರನ್ನ, ಕಸ್ದೀಯರನ್ನ,* ಜ್ಯೋತಿಷಿಗಳನ್ನ ಕರ್ಕೊಂಡು ಬರೋಕೆ ಹೇಳಿದ.+ ಬಾಬೆಲಿನ ವಿವೇಕಿಗಳಿಗೆ ರಾಜ “ಇಲ್ಲಿ ಬರಿದಿರೋದನ್ನ ಯಾರಾದ್ರೂ ಓದಿ ಅದ್ರ ಅರ್ಥ ಹೇಳಿದ್ರೆ ನಾನು ಅವನಿಗೆ ನೇರಳೆ ಬಣ್ಣದ* ಬಟ್ಟೆ ತೊಡಿಸ್ತೀನಿ. ಚಿನ್ನದ ಕಂಠಹಾರ ಹಾಕ್ತೀನಿ.+ ಅವನನ್ನ ಇಡೀ ಸಾಮ್ರಾಜ್ಯದಲ್ಲಿ ಮೂರನೇ ಮುಖ್ಯ ವ್ಯಕ್ತಿಯಾಗಿ ಮಾಡ್ತೀನಿ” ಅಂದ.+

8 ಆಗ ರಾಜನ ಎಲ್ಲ ವಿವೇಕಿಗಳು ಬಂದ್ರು. ಆದ್ರೆ ಅವ್ರಲ್ಲಿ ಯಾರಿಗೂ ಗೋಡೆ ಮೇಲೆ ಇರೋದನ್ನ ಓದೋಕೆ, ಅದ್ರ ಅರ್ಥ ಹೇಳೋಕೆ ಆಗಲಿಲ್ಲ.+ 9 ಹಾಗಾಗಿ ರಾಜ ಬೇಲ್ಶಚ್ಚರ ತುಂಬ ಹೆದರಿದ. ಅವನ ಮುಖ ಬಿಳಿಚ್ಕೊಂಡಿತು. ಅವನ ಪ್ರಧಾನರಿಗೆ ಏನ್‌ ಮಾಡಬೇಕಂತ ಗೊತ್ತಾಗಲಿಲ್ಲ.+

10 ರಾಜನ, ಅವನ ಪ್ರಧಾನರ ಮಾತುಗಳು ರಾಣಿ* ಕಿವಿಗೆ ಬಿದ್ದಾಗ ಅವಳು ಔತಣ ಮಾಡಿದ್ದ ಸಭಾಂಗಣಕ್ಕೆ ಬಂದು ರಾಜನಿಗೆ “ರಾಜ, ಚಿರಂಜೀವಿಯಾಗಿರು. ನೀನು ಭಯಪಡೋ ಅಗತ್ಯ ಇಲ್ಲ, ನಿನ್ನ ಮುಖ ಬಾಡದಿರಲಿ. 11 ನಿನ್ನ ರಾಜ್ಯದಲ್ಲಿ ಒಬ್ಬ ವ್ಯಕ್ತಿ* ಇದ್ದಾನೆ. ಅವನಲ್ಲಿ ಪವಿತ್ರ ದೇವರುಗಳ ಶಕ್ತಿ ಇದೆ. ದೇವರಿಗೆ ಇರೋ ಜ್ಞಾನ, ತಿಳುವಳಿಕೆ,* ವಿವೇಕ ಅವನಲ್ಲಿ ಇರೋದು ನಿನ್ನ ತಂದೆ ಕಾಲದಲ್ಲಿ ಗೊತ್ತಾಯ್ತು.+ ನಿನ್ನ ತಂದೆ ರಾಜ ನೆಬೂಕದ್ನೆಚ್ಚರ ಅವನನ್ನ ಮಾಟಗಾರರ, ಕಸ್ದೀಯರ, ಜ್ಯೋತಿಷಿಗಳ ಮುಖ್ಯಸ್ಥನಾಗಿ ಮಾಡಿದ್ದ.+ ಹೌದು ನಿಜವಾಗ್ಲೂ ನಿನ್ನ ತಂದೆ ಹಾಗೆ ಮಾಡಿದ್ದ. 12 ರಾಜನಾಗಿದ್ದ ನಿನ್ನ ತಂದೆ ಬೇಲ್ತೆಶಚ್ಚರ+ ಅಂತ ಹೆಸ್ರಿಟ್ಟಿದ್ದ ಆ ದಾನಿಯೇಲನಿಗೆ ಅದ್ಭುತ ಬುದ್ಧಿಶಕ್ತಿ ಇತ್ತು. ಕನಸುಗಳ ಅರ್ಥ ಹೇಳೋಕೆ, ಒಗಟು ಬಿಡಿಸೋಕೆ, ದೊಡ್ಡ ದೊಡ್ಡ ಸಮಸ್ಯೆ ಪರಿಹರಿಸೋಕೆ* ಬೇಕಾದ ಜ್ಞಾನ, ತಿಳುವಳಿಕೆ ಇತ್ತು.+ ಈಗ ಆ ದಾನಿಯೇಲನನ್ನ ಕರೆಸು, ನಿನಗೆ ಈ ಬರಹದ ಅರ್ಥ ಹೇಳ್ತಾನೆ” ಅಂದ್ಳು.

13 ಹಾಗಾಗಿ ದಾನಿಯೇಲನನ್ನ ರಾಜನ ಹತ್ರ ಕರ್ಕೊಂಡು ಬಂದ್ರು. ಆಗ ರಾಜ ದಾನಿಯೇಲನಿಗೆ ಹೀಗಂದ: “ನೀನು ದಾನಿಯೇಲನಾ? ನನ್ನ ಅಪ್ಪ ನಿನ್ನನ್ನ ಯೆಹೂದದಿಂದ ಕೈದಿಯಾಗಿ ಕರ್ಕೊಂಡು ಬಂದ್ನಾ?+ 14 ನಿನ್ನಲ್ಲಿ ದೇವರುಗಳ ಶಕ್ತಿ ಇದೆ+ ಅಂತ, ನಿನ್ನಲ್ಲಿ ಜ್ಞಾನ, ತಿಳುವಳಿಕೆ, ಅದ್ಭುತ ವಿವೇಕ ಇದೆ ಅಂತ ನಿನ್ನ ಬಗ್ಗೆ ಕೇಳಿಸ್ಕೊಂಡೆ.+ 15 ಈ ಬರಹ ಓದೋಕೆ, ಇದ್ರ ಅರ್ಥ ಹೇಳೋಕೆ ವಿವೇಕಿಗಳನ್ನ, ಮಾಟಗಾರರನ್ನ ನನ್ನ ಮುಂದೆ ಕರ್ಕೊಂಡು ಬಂದ್ರು. ಆದ್ರೆ ಅವ್ರಿಂದ ಆಗಲಿಲ್ಲ.+ 16 ನೀನು ಅರ್ಥಗಳನ್ನ ಹೇಳ್ತೀಯ,+ ದೊಡ್ಡ ದೊಡ್ಡ ಸಮಸ್ಯೆಗಳನ್ನ ಬಗೆಹರಿಸ್ತೀಯ* ಅಂತ ನನಗೆ ಗೊತ್ತಾಯ್ತು. ಈಗ ನೀನು ಈ ಬರಹ ಓದಿದ್ರೆ, ಇದ್ರ ಅರ್ಥ ಹೇಳಿದ್ರೆ ನಿನಗೆ ನೇರಳೆ ಬಣ್ಣದ* ಬಟ್ಟೆ ಹಾಕ್ತೀನಿ. ಚಿನ್ನದ ಕಂಠಹಾರ ಹಾಕ್ತೀನಿ. ಇಡೀ ಸಾಮ್ರಾಜ್ಯದಲ್ಲಿ ನಿನ್ನನ್ನ ಮೂರನೇ ಮುಖ್ಯ ವ್ಯಕ್ತಿಯಾಗಿ ಮಾಡ್ತೀನಿ.”+

17 ಅದಕ್ಕೆ ದಾನಿಯೇಲ “ನಾನು ಆ ಬರಹ ಓದಿ, ಅದ್ರ ಅರ್ಥ ಹೇಳ್ತೀನಿ. ಆದ್ರೆ ನನಗೆ ಉಡುಗೊರೆಗಳು ಬೇಡ, ಅದನ್ನ ಬೇರೆಯವ್ರಿಗೆ ಕೊಡು. 18 ರಾಜ, ಸರ್ವೋನ್ನತ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ಸಾಮ್ರಾಜ್ಯವನ್ನ, ಹೆಸ್ರನ್ನ, ಗೌರವವನ್ನ, ವೈಭವವನ್ನ ಕೊಟ್ಟಿದ್ದನು.+ 19 ಆತನು ನಿನ್ನ ತಂದೆಗೆ ಕೊಟ್ಟ ಹೆಸ್ರಿಂದಾಗಿ ಎಲ್ಲ ಜನ್ರು, ದೇಶಗಳು, ಬೇರೆಬೇರೆ ಭಾಷೆ ಮಾತಾಡೋ ಜನ್ರ ಗುಂಪುಗಳು ನಿನ್ನ ತಂದೆಯ ಮುಂದೆ ಹೆದರಿ ನಡುಗ್ತಿದ್ವು.+ ನಿನ್ನ ತಂದೆ ಮನಸ್ಸಿಗೆ ಬಂದವ್ರನ್ನ ಕೊಂದುಹಾಕಿದ, ಮನಸ್ಸಿಗೆ ಬಂದವ್ರನ್ನ ಜೀವಂತ ಬಿಟ್ಟ, ಮನಸ್ಸಿಗೆ ಬಂದವ್ರಿಗೆ ಗೌರವ ಕೊಟ್ಟ, ಮನಸ್ಸಿಗೆ ಬಂದವ್ರಿಗೆ ಅವಮಾನ ಮಾಡ್ದ.+ 20 ಆದ್ರೆ ಯಾವಾಗ ಅವನ ಹೃದಯದಲ್ಲಿ ಅಹಂಕಾರ ತುಂಬಿತೋ, ಯಾವಾಗ ಅವನು ಮೊಂಡನಾದ್ನೋ ಆಗ ಸೊಕ್ಕಿಂದ ನಡ್ಕೊಂಡ.+ ಹಾಗಾಗಿ ತನ್ನ ಸಿಂಹಾಸನ, ಪ್ರತಿಷ್ಠೆ ಕಳ್ಕೊಂಡ. 21 ಅವನನ್ನ ಮನುಷ್ಯರ ಮಧ್ಯದಿಂದ ಓಡಿಸಿಬಿಟ್ರು. ಅವನಲ್ಲಿದ್ದ ಮನುಷ್ಯ ಹೃದಯ ಹೋಗಿ ಪ್ರಾಣಿ ಹೃದಯ ಬಂತು. ಕಾಡುಕತ್ತೆಗಳ ಜೊತೆ ವಾಸ ಮಾಡ್ತಿದ್ದ. ಹೋರಿಗಳಿಗೆ ಹುಲ್ಲು ಕೊಡೋ ತರ ಅವನಿಗೆ ತಿನ್ನೋಕೆ ಹುಲ್ಲು ಕೊಟ್ರು. ಅವನ ದೇಹ ಆಕಾಶದ ಇಬ್ಬನಿಯಿಂದ ನೆನಿತು. ಮನುಷ್ಯರ ಸಾಮ್ರಾಜ್ಯದ ಮೇಲೆ ಸರ್ವೋನ್ನತ ದೇವರೇ ಅಧಿಕಾರಿ, ಆತನು ಅದನ್ನ ಇಷ್ಟ ಬಂದವ್ರಿಗೆ ಕೊಡ್ತಾನೆ ಅಂತ ತಿಳ್ಕೊಳ್ಳೋ ತನಕ ನಿನ್ನ ಅಪ್ಪ ಹೀಗೇ ಇದ್ದ.+

22 ಆದ್ರೆ ಅವನ ಮಗನಾಗಿರೋ ಬೇಲ್ಶಚ್ಚರನೇ, ಇದೆಲ್ಲ ನಿನಗೆ ಗೊತ್ತಿದ್ರೂ ನೀನು ತಗ್ಗಿಬಗ್ಗಿ ನಡಿಲಿಲ್ಲ. 23 ಬದಲಿಗೆ ದೇವರ ಮುಂದೆ ಸೊಕ್ಕಿಂದ ನಡ್ಕೊಂಡೆ.+ ಆತನ ಆಲಯದ ಪಾತ್ರೆಗಳನ್ನ ತರಿಸಿ+ ಅದ್ರಲ್ಲಿ ನೀನು, ನಿನ್ನ ಪ್ರಧಾನರು, ನಿನ್ನ ಉಪಪತ್ನಿಯರು, ನಿನ್ನ ಬೇರೆ ಪತ್ನಿಯರು ದ್ರಾಕ್ಷಾಮದ್ಯ ಕುಡಿದ್ರಿ. ಯಾವುದನ್ನೂ ನೋಡಕ್ಕಾಗದ, ಕೇಳಿಸ್ಕೊಳ್ಳೋಕೆ ಆಗದ, ಏನೂ ಗೊತ್ತಾಗದ ಬೆಳ್ಳಿ, ಚಿನ್ನ, ತಾಮ್ರ, ಕಬ್ಬಿಣ, ಮರ, ಕಲ್ಲಿನ ದೇವರುಗಳನ್ನ ಹೊಗಳ್ತಾ ಇದ್ದೆ.+ ಆದ್ರೆ ಯಾರ ಕೈಯಲ್ಲಿ ನಿನ್ನ ಉಸಿರು, ನಿನ್ನ ಜೀವ ಇದ್ಯೋ ಆ ದೇವರಿಗೆ+ ನೀನು ಗೌರವ ಕೊಡಲಿಲ್ಲ. 24 ಹಾಗಾಗಿ ಆತನು ಒಂದು ಕೈಯನ್ನ ಕಳಿಸಿ ಈ ಬರಹ ಕೆತ್ತಿಸಿದ್ದಾನೆ.+ 25 ಕೆತ್ತಿರೋ ಬರಹ ಏನಂದ್ರೆ: ಮೆನೇ, ಮೆನೇ, ತೆಕೇಲ್‌ ಮತ್ತು ಪರ್ಸಿನ್‌.

26 ಅದ್ರ ಅರ್ಥ ಹೀಗಿದೆ: ಮೆನೇ ಅಂದ್ರೆ ದೇವರು ನಿನ್ನ ಆಡಳಿತದ ದಿನಗಳನ್ನ ಲೆಕ್ಕ ಮಾಡಿ ಅದಕ್ಕೆ ಅಂತ್ಯ ತಂದಿದ್ದಾನೆ.+

27 ತೆಕೇಲ್‌ ಅಂದ್ರೆ ನಿನ್ನನ್ನ ತಕ್ಕಡಿಯಲ್ಲಿ ತೂಗಿ ನೋಡಿದಾಗ ನಿನ್ನಲ್ಲಿ ಕೊರತೆ ಕಂಡುಬಂದಿದೆ.

28 ಪೆರೇಸ್‌ ಅಂದ್ರೆ ನಿನ್ನ ಸಾಮ್ರಾಜ್ಯ ಎರಡು ಭಾಗ ಆಗಿದೆ, ಅದು ಮೇದ್ಯರಿಗೆ ಮತ್ತು ಪರ್ಶಿಯನ್ನರಿಗೆ ಹೋಗುತ್ತೆ” ಅಂದ.+

29 ಆಮೇಲೆ ಬೇಲ್ಶಚ್ಚರನ ಅಪ್ಪಣೆ ತರ ದಾನಿಯೇಲನಿಗೆ ನೇರಳೆ ಬಣ್ಣದ* ಬಟ್ಟೆ ತೊಡಿಸಿದ್ರು. ಅವನಿಗೆ ಚಿನ್ನದ ಕಂಠಹಾರ ಹಾಕಿದ್ರು. ಅವನು ಇಡೀ ಸಾಮ್ರಾಜ್ಯದ ಮೂರನೇ ಮುಖ್ಯ ವ್ಯಕ್ತಿಯಾಗಿ ಆಳ್ತಾನೆ ಅಂತ ಘೋಷಣೆ ಆಯ್ತು.+

30 ಆ ರಾತ್ರಿನೇ ಕಸ್ದೀಯ ರಾಜನಾದ ಬೇಲ್ಶಚ್ಚರನನ್ನ ಕೊಂದು ಬಿಟ್ರು.+ 31 ಅವನ ಸಾಮ್ರಾಜ್ಯ ಮೇದ್ಯನಾದ ದಾರ್ಯಾವೆಷನಿಗೆ+ ಸಿಕ್ತು. ಆಗ ದಾರ್ಯಾವೆಷನಿಗೆ ಸುಮಾರು 62 ವರ್ಷ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ