ಫೆಬ್ರವರಿ 4ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 4ರ ವಾರ
ಗೀತೆ 28 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 15 ಪ್ಯಾ. 18-23, 157ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಮತ್ತಾಯ 22-25 (10 ನಿ.)
ನಂ. 1: ಮತ್ತಾಯ 23:25-39 (4 ನಿಮಿಷದೊಳಗೆ)
ನಂ. 2: ಅಬ್ರಹಾಮನೊಂದಿಗೆ ದೇವರು ಮಾಡಿದ ಒಡಂಬಡಿಕೆ—ಬೈಬಲ್ ಅದರಲ್ಲಿ ಏನಿದೆ? ಪು. 7 (5 ನಿ.)
ನಂ. 3: ಜ್ಞಾನೋಕ್ತಿ 3:5ನ್ನು ಪಾಲಿಸುವುದು ವಿವೇಕಯುತವೆಂದು ಬೈಬಲಿನ ಯಾವ ಮಾದರಿಗಳು ತೋರಿಸಿಕೊಡುತ್ತವೆ? (5 ನಿ.)
❑ ಸೇವಾ ಕೂಟ:
15 ನಿ: ಫೆಬ್ರವರಿ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ಸಲಹೆಗಳು. ಚರ್ಚೆ. ನಮ್ಮ ಸೇವಾಕ್ಷೇತ್ರದ ಜನರಿಗೆ ಜನವರಿ-ಮಾರ್ಚ್ ಎಚ್ಚರ! ಪತ್ರಿಕೆ ಯಾಕೆ ಇಷ್ಟವಾಗಬಹುದೆಂದು 30-60 ಸೆಕೆಂಡುಗಳಲ್ಲಿ ತಿಳಿಸಿ. ನಂತರ ಮುಖಪುಟ ಲೇಖನ ಉಪಯೋಗಿಸಿ ಯಾವ ಪ್ರಶ್ನೆಗಳನ್ನು ಕೇಳಬಹುದೆಂದು ಸಭಿಕರನ್ನು ಕೇಳಿ. ಅನಂತರ ಯಾವ ವಚನಗಳನ್ನು ಓದಬಹುದೆಂದು ಕೇಳಿ. ಪತ್ರಿಕೆಯನ್ನು ಹೇಗೆ ನೀಡಬಹುದೆಂಬ ಪ್ರಾತ್ಯಕ್ಷಿಕೆ ಇರಲಿ.
15 ನಿ: ಸ್ಥಳೀಯ ಅಗತ್ಯಗಳು.
ಗೀತೆ 95 ಮತ್ತು ಪ್ರಾರ್ಥನೆ