ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ‘ಪುರುಷರ ರೂಪದಲ್ಲಿರುವ ದಾನಗಳನ್ನು’ ಗಣ್ಯಮಾಡುವುದು
    ಕಾವಲಿನಬುರುಜು—1999 | ಜೂನ್‌ 1
    • “ಅವರಿಗೆ ಅಸಾಧಾರಣ ಪರಿಗಣನೆಗಿಂತಲೂ ಹೆಚ್ಚಿನದ್ದನ್ನು ನೀಡಿರಿ”

      14, 15. (ಎ) ಒಂದನೆಯ ಥೆಸಲೊನೀಕ 5:12, 13ಕ್ಕನುಸಾರ, ಹಿರಿಯರು ನಮ್ಮ ಪರಿಗಣನೆಗೆ ಏಕೆ ಅರ್ಹರಾಗಿದ್ದಾರೆ? (ಬಿ) ಹಿರಿಯರು ‘ನಮ್ಮಲ್ಲಿ ಪ್ರಯಾಸಪಟ್ಟು ಕೆಲಸಮಾಡುತ್ತಿದ್ದಾರೆಂದು’ ಏಕೆ ಹೇಳಬಹುದಾಗಿದೆ?

      14 “ಪುರುಷರ ರೂಪದಲ್ಲಿ ದಾನ”ಗಳಾಗಿರುವವರಿಗೆ ಪರಿಗಣನೆಯನ್ನು ತೋರಿಸುವ ಮೂಲಕವೂ ನಾವು ನಮ್ಮ ಗಣ್ಯತೆಯನ್ನು ಪ್ರದರ್ಶಿಸಬಲ್ಲೆವು. ಥೆಸಲೊನೀಕದ ಸಭೆಗೆ ಬರೆಯುತ್ತಾ, ಪೌಲನು ಅದರ ಸದಸ್ಯರಿಗೆ ಬುದ್ಧಿವಾದ ನೀಡಿದ್ದು: “ಯಾರು ನಿಮ್ಮಲ್ಲಿ ಪ್ರಯಾಸಪಟ್ಟು ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಸನ್ಮಾನಮಾಡಬೇಕೆಂದು [“ಅಸಾಧಾರಣವಾದ ಪರಿಗಣನೆಗಿಂತಲೂ ಹೆಚ್ಚಿನದ್ದನ್ನು ನೀಡಬೇಕೆಂದು,” NW] ನಿಮ್ಮನ್ನು ಬೇಡಿಕೊಳ್ಳುತ್ತೇವೆ.” (1 ಥೆಸಲೊನೀಕ 5:12, 13) “ಪ್ರಯಾಸಪಟ್ಟು” ಎಂಬುದು, ನಮ್ಮ ಪರವಾಗಿ ನಿಸ್ವಾರ್ಥ ಭಾವದಿಂದ ತಮ್ಮನ್ನೇ ನೀಡಿಕೊಳ್ಳುವ ಸಮರ್ಪಿತ ಹಿರಿಯರನ್ನು ಯೋಗ್ಯವಾಗಿ ಚಿತ್ರಿಸುವುದಿಲ್ಲವೊ? ಈ ಪ್ರಿಯ ಸಹೋದರರು ಹೊತ್ತುಕೊಳ್ಳುವ ಭಾರಿ ಹೊರೆಯ ಕುರಿತು ಒಂದು ಕ್ಷಣ ಯೋಚಿಸಿ ನೋಡಿ.

  • ‘ಪುರುಷರ ರೂಪದಲ್ಲಿರುವ ದಾನಗಳನ್ನು’ ಗಣ್ಯಮಾಡುವುದು
    ಕಾವಲಿನಬುರುಜು—1999 | ಜೂನ್‌ 1
    • 16. ಹಿರಿಯರಿಗೆ ನಾವು ಪರಿಗಣನೆಯನ್ನು ತೋರಿಸಬಹುದಾದ ವಿಧಗಳನ್ನು ವಿವರಿಸಿರಿ.

      16 ನಾವು ಹೇಗೆ ಅವರಿಗೆ ಪರಿಗಣನೆಯನ್ನು ತೋರಿಸಸಾಧ್ಯವಿದೆ? ಒಂದು ಬೈಬಲ್‌ ಜ್ಞಾನೋಕ್ತಿಯು ಹೇಳುವುದು: “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ!” (ಜ್ಞಾನೋಕ್ತಿ 15:23; 25:11) ನಾವು ಅವರ ಪರಿಶ್ರಮವನ್ನು ಲಘುವಾಗಿ ಎಣಿಸುವುದಿಲ್ಲವೆಂದು ನಮ್ಮ ಯಥಾರ್ಥವಾದ ಗಣ್ಯತೆ ಹಾಗೂ ಉತ್ತೇಜನವು ತೋರಿಸಬಲ್ಲದು. ಅಲ್ಲದೆ, ನಾವು ಅವರಿಂದ ಅಪೇಕ್ಷಿಸುವ ವಿಷಯದಲ್ಲೂ ಮಿತಿಯುಳ್ಳವರಾಗಿರಬೇಕು. ಅದೇ ಸಮಯದಲ್ಲಿ, ಸಹಾಯಕ್ಕಾಗಿ ಅವರನ್ನು ಸಮೀಪಿಸಲು ನಾವು ಎಂದೂ ಹಿಂಜರಿಯಬಾರದು. ಕೆಲವೊಮ್ಮೆ ‘ನಮ್ಮ ಹೃದಯವು ನೊಂದು’ಹೋಗಿರುವಾಗ, ದೇವರ ವಾಕ್ಯವನ್ನು ‘ಬೋಧಿಸಲು ಅರ್ಹರಾಗಿರು’ವವರಿಂದ ಶಾಸ್ತ್ರೀಯ ಉತ್ತೇಜನ, ಮಾರ್ಗದರ್ಶನ, ಇಲ್ಲವೆ ಸಲಹೆಯ ಅಗತ್ಯ ನಮಗಿರಬಹುದು. (ಕೀರ್ತನೆ 55:4; 1 ತಿಮೊಥೆಯ 3:2) ಅದೇ ಸಮಯದಲ್ಲಿ, ಹಿರಿಯನೊಬ್ಬನು ನಿರ್ದಿಷ್ಟವಾದ ಸಮಯವನ್ನು ಮಾತ್ರ ನಮಗೆ ಕೊಡಸಾಧ್ಯವಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ, ಅವನು ತನ್ನ ಸ್ವಂತ ಕುಟುಂಬದ ಇಲ್ಲವೆ ಸಭೆಯಲ್ಲಿರುವ ಇತರರ ಅಗತ್ಯಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಪ್ರಯಾಸಪಟ್ಟು ಕೆಲಸಮಾಡುವ ಈ ಸಹೋದರರಿಗೆ ‘ಅನುಕಂಪ’ವನ್ನು ತೋರಿಸುತ್ತಾ, ನಾವು ಅವರಲ್ಲಿ ಅನುಚಿತವಾದ ಬೇಡಿಕೆಗಳನ್ನು ಮಾಡಲು ಬಯಸಲಾರೆವು. (1 ಪೇತ್ರ 3:8) ಬದಲಿಗೆ, ಅವರು ನಮಗೆ ಯೋಗ್ಯವಾಗಿ ಕೊಡಬಲ್ಲ ಸಮಯ ಹಾಗೂ ಗಮನಕ್ಕಾಗಿ ನಾವು ಗಣ್ಯತೆಯನ್ನು ತೋರಿಸೋಣ.—ಫಿಲಿಪ್ಪಿ 4:5.

      17, 18. ಹಿರಿಯರಾಗಿರುವ ಪುರುಷರ ಪತ್ನಿಯರು ಯಾವ ತ್ಯಾಗಗಳನ್ನು ಮಾಡುತ್ತಾರೆ, ಮತ್ತು ಈ ನಂಬಿಗಸ್ತ ಸಹೋದರಿಯರನ್ನು ನಾವು ಲಘುವಾಗಿ ಎಣಿಸುವುದಿಲ್ಲ ಎಂಬುದನ್ನು ಹೇಗೆ ತೋರಿಸಬಲ್ಲೆವು?

      17 ಈ ಹಿರಿಯರ ಪತ್ನಿಯರ ಕುರಿತೇನು? ಅವರಿಗೂ ನಾವು ಪರಿಗಣನೆಯನ್ನು ತೋರಿಸಬೇಕಲ್ಲವೊ? ಎಷ್ಟೆಂದರೂ, ಅವರು ಸಭೆಯೊಂದಿಗೆ ತಮ್ಮ ಪತಿಯರನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಅನೇಕ ವೇಳೆ ತ್ಯಾಗಗಳನ್ನು ಮಾಡಬೇಕಾಗಿರುತ್ತದೆ. ಕೆಲವೊಮ್ಮೆ, ಹಿರಿಯರು ತಮ್ಮ ಕುಟುಂಬಗಳೊಂದಿಗೆ ಕಳೆಯಬಹುದಾದ ಸಂಜೆಯ ಸಮಯವನ್ನು ಸಭೆಯ ವಿಷಯಗಳಿಗಾಗಿ ಕಳೆಯಬೇಕಾಗುತ್ತದೆ. ಅನೇಕ ಸಭೆಗಳಲ್ಲಿರುವ ನಂಬಿಗಸ್ತ ಕ್ರೈಸ್ತ ಸ್ತ್ರೀಯರು ಇಂತಹ ತ್ಯಾಗಗಳನ್ನು ಮನಃಪೂರ್ವಕವಾಗಿ ಮಾಡುವುದರಿಂದ, ಅವರ ಪತಿಯಂದಿರು ಯೆಹೋವನ ಕುರಿಗಳನ್ನು ಪರಾಮರಿಸಸಾಧ್ಯವಾಗುತ್ತದೆ.—ಹೋಲಿಸಿ 2 ಕೊರಿಂಥ 12:15.

      18 ಈ ನಂಬಿಗಸ್ತ ಕ್ರೈಸ್ತ ಸಹೋದರಿಯರನ್ನು ನಾವು ಲಘುವಾಗಿ ಎಣಿಸುವುದಿಲ್ಲವೆಂದು ಹೇಗೆ ತೋರಿಸಸಾಧ್ಯವಿದೆ? ನಿಶ್ಚಯವಾಗಿಯೂ ಅವರ ಪತಿಯಂದಿರಲ್ಲಿ ಅನುಚಿತವಾದ ಬೇಡಿಕೆಗಳನ್ನು ಮಾಡದೆ ಇರುವ ಮೂಲಕವೇ. ಅದರೊಂದಿಗೆ, ಸರಳವಾದ ಗಣ್ಯತೆಯ ಮಾತುಗಳಲ್ಲಿರುವ ಸಾಮರ್ಥ್ಯವನ್ನು ನಾವು ಮರೆಯದಿರೋಣ. ಜ್ಞಾನೋಕ್ತಿ 16:24 ಹೇಳುವುದು: “ಸವಿನುಡಿಯು ಜೇನುಗೂಡು; ಅದು ಆತ್ಮಕ್ಕೆ ಸಿಹಿ, ಎಲುಬುಗಳಿಗೆ ಕ್ಷೇಮ.” ಈ ಕೆಳಗಿನ ಅನುಭವವನ್ನು ಪರಿಗಣಿಸಿರಿ. ಒಂದು ಕ್ರೈಸ್ತ ಕೂಟದ ನಂತರ, ವಿವಾಹಿತ ದಂಪತಿಗಳಿಬ್ಬರು ಒಬ್ಬ ಹಿರಿಯನನ್ನು ಸಮೀಪಿಸಿ ತಮ್ಮ ಹದಿವಯಸ್ಕ ಮಗನೊಂದಿಗೆ ಮಾತಾಡುವಂತೆ ಕೇಳಿಕೊಂಡರು. ಹಿರಿಯನು ಆ ದಂಪತಿಗಳೊಂದಿಗೆ ಮಾತಾಡುತ್ತಿರುವಾಗ, ಅವನ ಪತ್ನಿ ತಾಳ್ಮೆಯಿಂದ ಕಾದಳು. ತರುವಾಯ ಆ ತಾಯಿಯು ಹಿರಿಯನ ಪತ್ನಿಯ ಬಳಿಗೆ ಹೋಗಿ ಹೇಳಿದ್ದು: “ನನ್ನ ಕುಟುಂಬಕ್ಕೆ ನೆರವು ನೀಡಲು ನಿನ್ನ ಪತಿಯು ಕಳೆದ ಸಮಯಕ್ಕಾಗಿ ನಿನಗೆ ತುಂಬ ಉಪಕಾರ.” ಗಣ್ಯತೆಯ ಆ ಸರಳ ಹಾಗೂ ಹಿತವಾದ ಮಾತುಗಳು, ಆ ಹಿರಿಯನ ಪತ್ನಿಯ ಹೃದಯವನ್ನು ಸ್ಪರ್ಶಿಸಿತೆಂಬುದರಲ್ಲಿ ಸಂದೇಹವೇ ಇಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ