-
ಆದಿಕಾಂಡ 39:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಸಮಯ ಕಳೆದ ಹಾಗೆ ಧಣಿ ತನ್ನೆಲ್ಲ ಆಸ್ತಿ ನೋಡ್ಕೊಳ್ಳೋ ಜವಾಬ್ದಾರಿ ಸಹ ಯೋಸೇಫನಿಗೆ ಕೊಟ್ಟ. ಹಾಗಾಗಿ ಆ ಧಣಿಗೆ ಯಾವುದರ ಬಗ್ಗೆನೂ ಚಿಂತೆ ಇರಲಿಲ್ಲ. ಊಟಕ್ಕೆ ಏನೇನು ಇರಬೇಕು ಅನ್ನೋದನ್ನ ಮಾತ್ರ ಹೇಳ್ತಿದ್ದ. ಯೋಸೇಫ ದೊಡ್ಡವನಾದಾಗ ನೋಡೋಕೆ ತುಂಬ ಸುಂದರನಾಗಿದ್ದ. ಅವನಿಗೆ ಗಟ್ಟಿಮುಟ್ಟಾದ ಮೈಕಟ್ಟಿತ್ತು.
-
-
ಕೀರ್ತನೆ 105:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ರಾಜ ಅವನನ್ನ ತನ್ನ ಮನೆಗೆ ಯಜಮಾನನಾಗಿ ಮಾಡಿದ,
ತನ್ನ ಎಲ್ಲ ಆಸ್ತಿ ಮೇಲೆ ಅಧಿಕಾರಿಯಾಗಿ ಇಟ್ಟ.+
-
-
ಅ. ಕಾರ್ಯ 7:9, 10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಆ ನಮ್ಮ ಪೂರ್ವಜರು ಅವ್ರ ತಮ್ಮ ಯೋಸೇಫನ ಮೇಲೆ ಹೊಟ್ಟೆಕಿಚ್ಚು ಪಟ್ಟು+ ಅವನನ್ನ ಈಜಿಪ್ಟ್ ದೇಶದವ್ರಿಗೆ ಮಾರಿಬಿಟ್ರು.+ ಆದ್ರೆ ದೇವರು ಅವನ ಜೊತೆ ಇದ್ದನು.+ 10 ಅವನಿಗೆ ಬಂದ ಎಲ್ಲ ಕಷ್ಟಗಳಿಂದ ಅವನನ್ನ ಪಾರುಮಾಡಿದನು. ಅವನಿಗೆ ಎಂಥಾ ಸಾಮರ್ಥ್ಯ ಕೊಟ್ಟನಂದ್ರೆ ಈಜಿಪ್ಟಿನ ರಾಜ ಫರೋಹ ಅವನನ್ನ ನೋಡಿ ತುಂಬ ಇಷ್ಟಪಟ್ಟ. ಯೋಸೇಫ ಅವನ ಮುಂದೆ ಒಬ್ಬ ವಿವೇಕಿಯಾದ. ಫರೋಹ ಅವನನ್ನ ಈಜಿಪ್ಟಿನ ಮೇಲೆ, ತನ್ನ ಅರಮನೆ ಮೇಲೆ ಅಧಿಕಾರಿಯನ್ನಾಗಿ ನೇಮಿಸಿದ.+
-