-
ಆದಿಕಾಂಡ 47:29, 30ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 ಯಾಕೋಬನಿಗೆ ತಾನು ಇನ್ನು ತುಂಬ ದಿನ ಬದುಕಲ್ಲ+ ಅಂತ ಗೊತ್ತಾದಾಗ ಅವನು ತನ್ನ ಮಗ ಯೋಸೇಫನನ್ನ ಕರೆದು “ಮಗ, ನನಗೊಂದು ಸಹಾಯ ಮಾಡು. ನಾನು ಸತ್ತ ಮೇಲೆ ದಯವಿಟ್ಟು ನನ್ನನ್ನ ಈಜಿಪ್ಟಲ್ಲಿ ಸಮಾಧಿ ಮಾಡಬೇಡ. ನನ್ನ ಆಸೆ ನೆರವೇರಿಸ್ತೀಯ ಅಂತ ನನ್ನ ತೊಡೆ ಕೆಳಗೆ ನಿನ್ನ ಕೈಯಿಟ್ಟು ಆಣೆ ಮಾಡು. ನನಗೆ ಶಾಶ್ವತ ಪ್ರೀತಿ ತೋರಿಸ್ತೀಯ, ವಿಶ್ವಾಸ ಉಳಿಸ್ಕೊಳ್ತೀಯ ಅಂತ ಆಣೆ ಮಾಡು.+ 30 ನಾನು ಸತ್ತ ಮೇಲೆ ನನ್ನ ದೇಹನಾ ಈಜಿಪ್ಟಿಂದ ತಗೊಂಡು ಹೋಗಿ ನನ್ನ ಪೂರ್ವಜರ ಸಮಾಧಿಯಲ್ಲೇ ಸಮಾಧಿ ಮಾಡಬೇಕು” ಅಂದ.+ ಅದಕ್ಕೆ ಯೋಸೇಫ “ನೀನು ಹೇಳಿದ ಹಾಗೇ ಮಾಡ್ತೀನಿ” ಅಂದ.
-
-
ಆದಿಕಾಂಡ 50:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಅವರು ಯಾಕೋಬನ ಶವವನ್ನ ಕಾನಾನ್ ದೇಶಕ್ಕೆ ತಗೊಂಡು ಹೋಗಿ ಮಮ್ರೆಗೆ ಹತ್ರ ಇದ್ದ ಮಕ್ಪೇಲದ ಜಮೀನಿನ ಗವಿಯಲ್ಲಿ ಸಮಾಧಿ ಮಾಡಿದ್ರು. ಸಮಾಧಿ ಮಾಡೋಕೆ ಆ ಜಮೀನನ್ನ ಅಬ್ರಹಾಮ ಹಿತ್ತಿಯನಾದ ಎಫ್ರೋನನಿಂದ ಖರೀದಿಸಿದ್ದ.+
-