23 ಆಗ ಆ ತಾತ ಹೊರಗೆ ಹೋಗಿ “ಬೇಡ ನನ್ನ ಸಹೋದರರೇ, ದಯವಿಟ್ಟು ಇಂಥ ಕೆಟ್ಟ ಕೆಲಸ ಮಾಡಬೇಡಿ. ಈ ಮನುಷ್ಯ ನನ್ನ ಮನೆಗೆ ಬಂದಿರೋ ಅತಿಥಿ. ಇಂಥ ನೀಚ ಕೆಲ್ಸ ಮಾಡಬೇಡಿ. 24 ಕನ್ಯೆಯಾಗಿರೋ ನನ್ನ ಮಗಳು, ಆ ಗಂಡಸಿನ ಉಪಪತ್ನಿ ಇಲ್ಲಿದ್ದಾರೆ. ನಾನು ಅವ್ರನ್ನ ಕರ್ಕೊಂಡು ಬರ್ತಿನಿ. ಬೇಕಾದ್ರೆ ಅವ್ರನ್ನ ಹಾಳುಮಾಡಿ.+ ಆದ್ರೆ ಈ ಮನುಷ್ಯನಿಗೆ ಇಂಥ ನೀಚ ಕೆಲ್ಸ ಮಾಡಬೇಡಿ” ಅಂದ.