-
ವಿಮೋಚನಕಾಂಡ 25:31-39ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಶುದ್ಧ ಚಿನ್ನದಿಂದ ದೀಪಸ್ತಂಭ+ ಮಾಡಬೇಕು. ಚಿನ್ನವನ್ನ ಸುತ್ತಿಗೆಯಿಂದ ಬಡಿದು ಅದನ್ನ ಮಾಡಬೇಕು. ದೀಪಸ್ತಂಭದ ಬುಡ, ದಿಂಡು, ಕೊಂಬೆಗಳು, ಪುಷ್ಪಪಾತ್ರೆಗಳು, ಮೊಗ್ಗುಗಳು, ಹೂವುಗಳು ಇದನ್ನೆಲ್ಲ ಚಿನ್ನದ ಒಂದೇ ತುಂಡಿಂದ ಮಾಡಬೇಕು.+ 32 ದೀಪಸ್ತಂಭದ ದಿಂಡಿನ ಎರಡು ಬದಿಗಳಲ್ಲಿ ಒಟ್ಟು ಆರು ಕೊಂಬೆಗಳು ಇರಬೇಕು. ದಿಂಡಿನ ಒಂದು ಬದಿ ಮೂರು ಕೊಂಬೆ, ಇನ್ನೊಂದು ಬದಿ ಮೂರು ಕೊಂಬೆ. 33 ಒಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆಗಳು ಇರಬೇಕು. ಒಂದೊಂದು ಪುಷ್ಪಪಾತ್ರೆಯ ನಂತ್ರ ಒಂದು ಮೊಗ್ಗು, ಒಂದು ಹೂವು ಇರಬೇಕು. ಇನ್ನೊಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆ ಇರಬೇಕು. ಒಂದೊಂದು ಪುಷ್ಪಪಾತ್ರೆ ನಂತ್ರ ಒಂದು ಮೊಗ್ಗು, ಒಂದು ಹೂ ಇರಬೇಕು. ದೀಪಸ್ತಂಭದ ಆರು ಕೊಂಬೆಗಳಲ್ಲೂ ಹೀಗೇ ಇರಬೇಕು. 34 ದೀಪಸ್ತಂಭದ ದಿಂಡಿನಲ್ಲಿ ಬಾದಾಮಿ ಹೂವಿನ ಆಕಾರದ ನಾಲ್ಕು ಪುಷ್ಪಪಾತ್ರೆ ಇರಬೇಕು. ಒಂದೊಂದು ಪುಷ್ಪಪಾತ್ರೆ ನಂತ್ರ ಒಂದು ಮೊಗ್ಗು, ಒಂದು ಹೂ ಇರಬೇಕು. 35 ಕವಲು ಒಡೆದಿರೋ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಮೊಗ್ಗು ಇರಬೇಕು. ದಿಂಡಿನಿಂದ ಕವಲು ಒಡೆದಿರೋ ಎಲ್ಲ ಆರು ಕೊಂಬೆಗಳ ಕೆಳಗೂ ಇದೇ ರೀತಿ ಇರಬೇಕು. 36 ಶುದ್ಧ ಚಿನ್ನದ ಒಂದೇ ತುಂಡಿಂದ ಮೊಗ್ಗುಗಳನ್ನ, ಕೊಂಬೆಗಳನ್ನ, ಇಡೀ ದೀಪಸ್ತಂಭವನ್ನ ಮಾಡಬೇಕು. ಚಿನ್ನವನ್ನ ಸುತ್ತಿಗೆಯಿಂದ ಬಡಿದು+ ಇದನ್ನೆಲ್ಲ ಮಾಡಬೇಕು. 37 ದೀಪಸ್ತಂಭಕ್ಕಾಗಿ ಏಳು ದೀಪಗಳನ್ನ ಮಾಡಬೇಕು. ದೀಪಗಳನ್ನ ಹಚ್ಚಿದಾಗ ಅದ್ರ ಮುಂದಿರೋ ಸ್ಥಳದಲ್ಲೆಲ್ಲ ಬೆಳಕು ಪ್ರಕಾಶಿಸುತ್ತೆ.+ 38 ಅದ್ರ ಚಿಮಟಗಳನ್ನ,* ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆಗಳನ್ನ ಶುದ್ಧ ಚಿನ್ನದಿಂದ ಮಾಡಬೇಕು.+ 39 ದೀಪಸ್ತಂಭವನ್ನ, ಅದ್ರ ಎಲ್ಲ ಉಪಕರಣಗಳನ್ನ ಒಂದು ತಲಾಂತು* ಶುದ್ಧ ಚಿನ್ನದಿಂದ ಮಾಡಬೇಕು.
-