-
ಅ. ಕಾರ್ಯ 7:30-34ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 “ಅಲ್ಲಿ 40 ವರ್ಷ ಕಳೆದ ಮೇಲೆ ಮೋಶೆ ಸಿನಾಯಿ ಬೆಟ್ಟದ ಹತ್ರದಲ್ಲಿದ್ದ ಅರಣ್ಯ ಪ್ರದೇಶದಲ್ಲಿದ್ದಾಗ ಒಬ್ಬ ದೇವದೂತ ಮುಳ್ಳಿನ ಪೊದೆಯೊಳಗೆ ಉರಿಯೋ ಬೆಂಕಿಯಲ್ಲಿ ಕಾಣಿಸ್ಕೊಂಡ.+ 31 ಅದನ್ನ ನೋಡಿ ಮೋಶೆಗೆ ಆಶ್ಚರ್ಯ ಆಯ್ತು. ಏನಿದು ಅಂತ ನೋಡೋಕೆ ಅದ್ರ ಹತ್ರ ಹೋಗ್ತಿದ್ದಾಗ ಯೆಹೋವನ* ಈ ಧ್ವನಿ ಅವನಿಗೆ ಕೇಳಿಸ್ತು 32 ‘ನಾನು ನಿಮ್ಮ ಪೂರ್ವಜರ ದೇವರು. ಅಂದ್ರೆ ಅಬ್ರಹಾಮ, ಇಸಾಕ, ಯಾಕೋಬನ ದೇವರು.’+ ಆಗ ಮೋಶೆಗೆ ಭಯ ಆಯ್ತು. ಅದ್ರ ಕಡೆ ಕಣ್ಣೆತ್ತಿ ನೋಡೋಕೂ ಧೈರ್ಯ ಬರ್ಲಿಲ್ಲ. 33 ಆಗ ಯೆಹೋವ* ಮೋಶೆಗೆ ‘ನಿನ್ನ ಚಪ್ಪಲಿ ಬಿಚ್ಚಿಡು. ಯಾಕಂದ್ರೆ ನೀನು ನಿಂತಿರೋ ನೆಲ ಪವಿತ್ರವಾಗಿದೆ. 34 ಈಜಿಪ್ಟಲ್ಲಿ ನನ್ನ ಜನ ಕಷ್ಟ ಪಡ್ತಿರೋದನ್ನ ನಾನು ಕಣ್ಣಾರೆ ನೋಡಿದ್ದೀನಿ. ನಾನು ಅವ್ರ ನರಳಾಟವನ್ನ ಕೇಳಿದ್ದೀನಿ.+ ಅದಕ್ಕೆ ಅವ್ರನ್ನ ಕಾಪಾಡಬೇಕಂತ ಇಳಿದುಬಂದಿದ್ದೀನಿ. ಬಾ, ನಾನು ನಿನ್ನನ್ನ ಈಜಿಪ್ಟಿಗೆ ಕಳಿಸ್ತೀನಿ’ ಅಂದನು.
-