11 ಅದಕ್ಕೆ ಈಜಿಪ್ಟಿನವರು ಇಸ್ರಾಯೇಲ್ಯರಿಗೆ ಕಷ್ಟವಾದ ಕೆಲಸ ಕೊಡೋಕೆ, ಅವರನ್ನ ಪೀಡಿಸೋಕೆ ಅಧಿಕಾರಿಗಳಿಗೆ ಹೇಳಿದ್ರು.+ ಆ ಅಧಿಕಾರಿಗಳು ಅವರಿಂದ ಬಲವಂತವಾಗಿ ದುಡಿಸ್ಕೊಳ್ತಾ ಇದ್ರು. ಹೀಗೆ ಇಸ್ರಾಯೇಲ್ಯರಿಂದ ಕೆಲಸ ಮಾಡಿಸಿ ಫರೋಹನಿಗೋಸ್ಕರ ಪಿತೋಮ್ ಮತ್ತು ರಾಮ್ಸೇಸ್+ ಅನ್ನೋ ಉಗ್ರಾಣ ಪಟ್ಟಣಗಳನ್ನ ಕಟ್ಟಿಸಿದ್ರು.