29 ಯೆಹೋವ ಸಬ್ಬತ್ತನ್ನ ನಿಮಗಾಗಿ ಏರ್ಪಾಡು ಮಾಡಿದ್ದಾನೆ ಅನ್ನೋದನ್ನ ಮರಿಬೇಡಿ.+ ಹಾಗಾಗಿ ಆರನೇ ದಿನ ಆತನು ನಿಮಗೆ ಎರಡು ದಿನಕ್ಕೆ ಬೇಕಾಗುವಷ್ಟು ಆಹಾರ ಕೊಡ್ತಿದ್ದಾನೆ. ಏಳನೇ ದಿನ ಹೊರಗೆ ಎಲ್ಲೂ ಹೋಗಬಾರದು, ಎಲ್ರೂ ಅವರಿರೋ ಜಾಗದಲ್ಲೇ ಇರ್ಬೇಕು” ಅಂದನು.
10 ಆದ್ರೆ ಏಳನೇ ದಿನ ನೀವು ನಿಮ್ಮ ದೇವರಾದ ಯೆಹೋವನಿಗೆ ಗೌರವ ಕೊಡೋಕೆ ಸಬ್ಬತ್ತನ್ನ ಆಚರಿಸಬೇಕು. ಆ ದಿನ ನೀವಾಗ್ಲಿ ನಿಮ್ಮ ಮಗನಾಗ್ಲಿ ಮಗಳಾಗ್ಲಿ ನಿಮ್ಮ ದಾಸನಾಗ್ಲಿ ದಾಸಿಯಾಗ್ಲಿ ನಿಮ್ಮ ಪ್ರದೇಶದೊಳಗೆ ವಾಸಿಸೋ ವಿದೇಶಿಯಾಗ್ಲಿ ಯಾವ ಕೆಲಸನೂ ಮಾಡಬಾರದು. ನೀವು ಸಾಕಿರೋ ಪ್ರಾಣಿಯಿಂದಾನೂ ಯಾವ ಕೆಲಸ ಮಾಡಿಸಬಾರದು.+