-
ವಿಮೋಚನಕಾಂಡ 14:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಅವರು ಮೋಶೆಗೆ “ನಮ್ಮನ್ನ ಈಜಿಪ್ಟಿಂದ ಇಲ್ಲಿಗೆ ಯಾಕೆ ಕರ್ಕೊಂಡು ಬಂದೆ? ಇಲ್ಲಿ ಸಾಯ್ಲಿ ಅಂತಾನಾ?+ ಈಜಿಪ್ಟಲ್ಲಿ ಸಮಾಧಿ ಮಾಡೋಕೆ ಜಾಗ ಇರಲಿಲ್ವಾ? ನೋಡು, ನಿನ್ನಿಂದ ನಮಗೆ ಎಂಥಾ ಪರಿಸ್ಥಿತಿ ಬಂತು.
-
-
ವಿಮೋಚನಕಾಂಡ 17:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಜನ್ರಿಗೆ ತುಂಬ ಬಾಯಾರಿಕೆ ಆಗಿತ್ತು. ಹಾಗಾಗಿ ಅವರು ಮೋಶೆ ವಿರುದ್ಧ ಗೊಣಗ್ತಾನೇ ಇದ್ರು.+ “ನಮ್ಮನ್ನ ಈಜಿಪ್ಟಿಂದ ಯಾಕೆ ಕರ್ಕೊಂಡು ಬಂದೆ? ಬಾಯಾರಿಕೆಯಿಂದ ಸಾಯಿಸಕ್ಕಾ? ನಾವು, ನಮ್ಮ ಮಕ್ಕಳು, ಪ್ರಾಣಿಗಳು ನೀರಿಲ್ಲದೆ ಸಾಯ್ತೀವಿ” ಅಂದ್ರು.
-
-
ಅರಣ್ಯಕಾಂಡ 16:13, 14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ನೀನು ಮಾಡಿರೋದು ಒಂದಾ ಎರಡಾ? ಹಾಲೂ ಜೇನೂ ಹರಿಯೋ ದೇಶದಿಂದ ನಮ್ಮನ್ನ ಕರ್ಕೊಂಡು ಬಂದು ಈ ಕಾಡಲ್ಲಿ ಸಾಯಿಸ್ತಿದ್ದೀಯ.+ ಇಷ್ಟೆಲ್ಲ ಮಾಡಿದ್ದು ಸಾಲದು ಅಂತ ಈಗ ನಮ್ಮ ಮೇಲೆ ಸರ್ವಾಧಿಕಾರಿಯಾಗಿ ಆಳಬೇಕಂತ ಇದ್ದೀಯಾ? 14 ನೀನು ನಮ್ಮನ್ನ ಹಾಲೂ ಜೇನೂ ಹರಿಯೋ ದೇಶಕ್ಕೆ+ ಕರ್ಕೊಂಡು ಹೋಗ್ತೀನಂತ ಹೇಳಿದ್ದೆ. ಆದ್ರೆ ಎಲ್ಲಿ ಕರ್ಕೊಂಡು ಹೋದೆ? ಹೊಲ, ದ್ರಾಕ್ಷಿತೋಟ ಯಾವುದನ್ನೂ ನಮಗೆ ಕೊಡಲಿಲ್ಲ. ಜನ ಕಣ್ಣು ಮುಚ್ಕೊಂಡು ನಿನ್ನ ಹಿಂದೆ ಬರಬೇಕಂತ ನೆನಸ್ತೀಯಾ? ನಾವು ಬರಲ್ಲ!” ಅಂದ್ರು.
-