-
ಅರಣ್ಯಕಾಂಡ 27:12-14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಆಮೇಲೆ ಯೆಹೋವ ಮೋಶೆಗೆ “ನೀನು ಅಬಾರೀಮಿನ ಈ ಬೆಟ್ಟ+ ಹತ್ತಿ ಇಸ್ರಾಯೇಲ್ಯರಿಗೆ ನಾನು ಕೊಡೋ ದೇಶ ನೋಡು.+ 13 ಅದನ್ನ ನೋಡಿದ ಮೇಲೆ ನಿನ್ನ ಅಣ್ಣ ಆರೋನನ ತರ ನೀನೂ ಸಾಯ್ತೀಯ. ನಿನ್ನ ಪೂರ್ವಜರ ತರ ನಿನಗೂ ಸಮಾಧಿ ಆಗುತ್ತೆ.+ 14 ಯಾಕಂದ್ರೆ ಚಿನ್ ಕಾಡಲ್ಲಿ ಇಸ್ರಾಯೇಲ್ಯರು ನನ್ನ ಜೊತೆ ಜಗಳ ಮಾಡಿದಾಗ ನಾನು ಅವರಿಗೆ ನೀರು ಕೊಟ್ಟೆ. ಆಗ ನೀವಿಬ್ರೂ ಜನ್ರ ಮುಂದೆ ನನ್ನನ್ನ ಪವಿತ್ರ ಅಂತ ತೋರಿಸ್ಕೊಟ್ಟು ಗೌರವ ಕೊಡಬೇಕಿತ್ತು.+ ಆದ್ರೆ ನೀವು ನಾನು ಹೇಳಿದ್ದನ್ನ ಕೇಳದೆ ನನ್ನ ವಿರುದ್ಧ ದಂಗೆ ಎದ್ರಿ” ಅಂದನು. ಆತನು ಚಿನ್ ಕಾಡಿನ+ ಕಾದೇಶಿನಲ್ಲಿರೋ+ ಮೆರೀಬಾದ ನೀರಿನ ಹತ್ರ+ ನಡೆದ ಘಟನೆ ಬಗ್ಗೆ ಹೇಳ್ತಿದ್ದನು.
-
-
ಧರ್ಮೋಪದೇಶಕಾಂಡ 1:37ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
37 (ನಿಮ್ಮಿಂದ ಯೆಹೋವ ನನ್ನ ಮೇಲೂ ಕೋಪ ಮಾಡ್ಕೊಂಡನು. “ಆ ದೇಶಕ್ಕೆ ನೀನೂ ಹೋಗಲ್ಲ.+
-
-
ಧರ್ಮೋಪದೇಶಕಾಂಡ 3:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಆದ್ರೆ ನಿಮ್ಮಿಂದಾಗಿ ಯೆಹೋವನಿಗೆ ಇನ್ನೂ ನನ್ನ ಮೇಲೆ ತುಂಬ ಕೋಪ ಇತ್ತು.+ ಹಾಗಾಗಿ ಆತನು ಒಪ್ಪಲಿಲ್ಲ. ಯೆಹೋವ ನನಗೆ ‘ಸಾಕು! ಈ ವಿಷ್ಯದ ಬಗ್ಗೆ ಇನ್ನು ಯಾವತ್ತೂ ನನ್ನ ಹತ್ರ ಮಾತಾಡಬೇಡ.
-