19 ಆ ಕಾಲದಲ್ಲಿ ಇಸ್ರಾಯೇಲಲ್ಲಿ ರಾಜ ಇರಲಿಲ್ಲ.+ ಎಫ್ರಾಯೀಮ್ ಬೆಟ್ಟ ಪ್ರದೇಶದ+ ಮೂಲೆಯಲ್ಲಿ ಒಬ್ಬ ಲೇವಿ ಇದ್ದ. ಅವನು ಯೆಹೂದದ ಬೆತ್ಲೆಹೇಮಿನ+ ಒಂದು ಹುಡುಗಿನ ಮದುವೆ ಆಗಿ ಅವಳನ್ನ ಉಪಪತ್ನಿ ಮಾಡ್ಕೊಂಡ. 2 ಆದ್ರೆ ಅವಳು ಮೋಸಮಾಡಿ ಅವನನ್ನ ಬಿಟ್ಟು ಯೆಹೂದದ ಬೆತ್ಲೆಹೇಮಲ್ಲಿರೋ ಅಪ್ಪನ ಮನೆಗೆ ಹೋದಳು. ಅಲ್ಲಿ ನಾಲ್ಕು ತಿಂಗಳು ಇದ್ದಳು.