16 ಉಳಿದ ಹಿಟ್ಟು ಆರೋನನಿಗೆ ಅವನ ಮಕ್ಕಳಿಗೆ ಸೇರುತ್ತೆ.+ ಆ ಹಿಟ್ಟಿಂದ ಹುಳಿ ಇಲ್ಲದ ರೊಟ್ಟಿಗಳನ್ನ ಮಾಡಿ ಪವಿತ್ರವಾದ ಒಂದು ಜಾಗದಲ್ಲಿ ಅಂದ್ರೆ ದೇವದರ್ಶನ ಡೇರೆಯ ಅಂಗಳದಲ್ಲಿ ತಿನ್ನಬೇಕು.+
14 ಅಷ್ಟೇ ಅಲ್ಲ ಓಲಾಡಿಸೋ ಅರ್ಪಣೆಯ ಎದೆಭಾಗವನ್ನ, ಪವಿತ್ರ ಪಾಲಿಂದ ಪ್ರಾಣಿಯ ಕಾಲನ್ನ ತಗೊಂಡು+ ನೀವು, ನಿಮ್ಮ ಮಕ್ಕಳು ಶುದ್ಧವಾದ ಒಂದು ಜಾಗದಲ್ಲಿ ತಿನ್ನಬೇಕು.+ ಯಾಕಂದ್ರೆ ಈ ಭಾಗಗಳು ಇಸ್ರಾಯೇಲ್ಯರು ಅರ್ಪಿಸೋ ಸಮಾಧಾನ ಬಲಿಗಳಿಂದ ನಿಮಗೆ, ನಿಮ್ಮ ಮಕ್ಕಳಿಗೆ ಸಿಗೋ ಪಾಲು.
9 ಬೆಂಕಿಯಲ್ಲಿ ಅರ್ಪಿಸೋ ಅತಿ ಪವಿತ್ರ ಅರ್ಪಣೆಗಳಲ್ಲಿ ಅಂದ್ರೆ ಧಾನ್ಯ ಅರ್ಪಣೆಗಳು,+ ಪಾಪಪರಿಹಾರಕ ಬಲಿಗಳು,+ ದೋಷಪರಿಹಾರಕ ಬಲಿಗಳು+ ಹೀಗೆ ಜನ ನನಗೆ ತಂದು ಕೊಡೋ ಎಲ್ಲ ಅರ್ಪಣೆಗಳಿಂದ ಒಂದು ಪಾಲು ನಿಮಗೆ ಸಿಗುತ್ತೆ. ಅದು ನಿನಗೂ ನಿನ್ನ ಮಕ್ಕಳಿಗೂ ಅತಿ ಪವಿತ್ರವಾಗಿದೆ.