19 ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶಕ್ಕೆ ಹೋದ್ಮೇಲೆ, ನಿಮ್ಮ ಸುತ್ತ ಇರೋ ಶತ್ರುಗಳಿಂದ ಯೆಹೋವ ನಿಮ್ಮನ್ನ ರಕ್ಷಿಸಿ ನೆಮ್ಮದಿಯಿಂದ ಬದುಕೋ ತರ ಮಾಡಿದ ಮೇಲೆ+ ನೀವು ಅಮಾಲೇಕ್ಯರನ್ನ ನಾಶ ಮಾಡಬೇಕು. ಭೂಮಿ ಮೇಲೆ ಹೆಸ್ರೇ ಇಲ್ಲದ ಹಾಗೆ ಅವ್ರನ್ನ ನಾಶ ಮಾಡೋಕೆ+ ಮರಿಬಾರದು.
3 ಈಗ ನೀನು ಹೋಗಿ ಅಮಾಲೇಕ್ಯರನ್ನ+ ಸದೆಬಡಿದು ಅವ್ರನ್ನ, ಅವ್ರಿಗೆ ಸೇರಿದ ಎಲ್ಲವನ್ನೂ ಪೂರ್ತಿ ನಾಶಮಾಡು.+ ಅವ್ರಲ್ಲಿ ಒಬ್ರನ್ನೂ ಸುಮ್ನೆ* ಬಿಡಬಾರದು. ಗಂಡಸ್ರು, ಹೆಂಗಸ್ರು, ಮಕ್ಕಳು, ಕೂಸುಗಳು, ಹೋರಿಗಳು, ಕುರಿಗಳು, ಒಂಟೆಗಳು, ಕತ್ತೆಗಳು ಹೀಗೆ ಎಲ್ಲವನ್ನ ಸಾಯಿಸಬೇಕು.’”+