ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 33:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಜೊತೆ ಮಾತಾಡೋ ಹಾಗೇ ಯೆಹೋವ ಮೋಶೆ ಜೊತೆ ಮಾತಾಡ್ತಿದ್ದನು.+ ಮೋಶೆ ಪಾಳೆಯಕ್ಕೆ ವಾಪಸ್‌ ಬಂದಾಗೆಲ್ಲ ಯೆಹೋಶುವ+ ಆ ಡೇರೆಯಲ್ಲಿ ಇರ್ತಿದ್ದ. ನೂನನ ಮಗನಾದ ಇವನು ಮೋಶೆಯ ಸೇವಕನೂ ಸಹಾಯಕನೂ ಆಗಿದ್ದ.+

  • ಅರಣ್ಯಕಾಂಡ 11:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಆಗ ನೂನನ ಮಗನೂ ಯೌವನ ಪ್ರಾಯದಿಂದಾನೇ ಮೋಶೆಗೆ ಸೇವಕನೂ ಆಗಿದ್ದ ಯೆಹೋಶುವ+ ಕೂಡ್ಲೇ ಮೋಶೆಗೆ “ಸ್ವಾಮಿ ನೀನು ಅವರನ್ನ ತಡಿಬೇಕು!” ಅಂದ.+

  • ಅರಣ್ಯಕಾಂಡ 32:11, 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ‘ಈಜಿಪ್ಟಿಂದ ಬಂದ ಜನ್ರಲ್ಲಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನವರಲ್ಲಿ ಒಬ್ಬನೂ ಅಬ್ರಹಾಮ, ಇಸಾಕ, ಯಾಕೋಬರಿಗೆ+ ಕೊಡ್ತೀನಿ ಅಂತ ನಾನು ಮಾತುಕೊಟ್ಟ ದೇಶಕ್ಕೆ ಹೋಗಲ್ಲ.+ ಯಾಕಂದ್ರೆ ನಾನು ಹೇಳಿದ ಮಾತನ್ನ ಅವರು ಮನಸಾರೆ* ಪಾಲಿಸಲಿಲ್ಲ. 12 ಆದ್ರೆ ಕೆನಿಜೀಯನಾದ ಯೆಫುನ್ನೆಯ ಮಗ ಕಾಲೇಬ,+ ನೂನನ ಮಗ ಯೆಹೋಶುವ+ ಇವರಿಬ್ರು ಮಾತ್ರ ಯೆಹೋವನ ಮಾತನ್ನ ಮನಸಾರೆ ಪಾಲಿಸಿದ ಕಾರಣ ಆ ದೇಶಕ್ಕೆ ಹೋಗ್ತಾರೆ’ + ಅಂದನು.

  • ಧರ್ಮೋಪದೇಶಕಾಂಡ 34:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಮೋಶೆ ನೂನನ ಮಗ ಯೆಹೋಶುವನ ಮೇಲೆ ಕೈ ಇಟ್ಟು ಅವನನ್ನ ನಾಯಕನಾಗಿ ನೇಮಿಸಿದ್ರಿಂದ+ ಅವನಲ್ಲಿ ತುಂಬ ವಿವೇಕ ಇತ್ತು.* ಇಸ್ರಾಯೇಲ್ಯರು ಅವನು ಹೇಳಿದ ಹಾಗೆ ನಡಿಯೋಕೆ ಶುರುಮಾಡಿದ್ರು. ಮೋಶೆ ಮೂಲಕ ಯೆಹೋವ ಹೇಳಿದ ಹಾಗೆ ಅವರು ಮಾಡಿದ್ರು.+

  • ಯೆಹೋಶುವ 1:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 1 ಯೆಹೋವ ದೇವರ ಸೇವಕನಾಗಿದ್ದ ಮೋಶೆ ತೀರಿಹೋದ ಮೇಲೆ ಅವನ ಸಹಾಯಕ+ ಮತ್ತು ನೂನನ ಮಗ ಯೆಹೋಶುವನಿಗೆ* ಯೆಹೋವ ಹೀಗೆ ಹೇಳಿದನು:+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ