-
1 ಸಮುವೇಲ 29:2-4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಫಿಲಿಷ್ಟಿಯರ ಪ್ರಭುಗಳು ನೂರು ನೂರು, ಸಾವಿರ ಸಾವಿರ ಸೈನಿಕರ ಗುಂಪುಗಳನ್ನ ಕರ್ಕೊಂಡು ಹೋಗ್ತಿದ್ರು. ದಾವೀದ, ಅವನ ಗಂಡಸ್ರು ಸೈನ್ಯದ ಹಿಂದೆ ಆಕೀಷನ+ ಜೊತೆ ಬರ್ತಿದ್ರು. 3 ಆದ್ರೆ ಫಿಲಿಷ್ಟಿಯರ ಅಧಿಕಾರಿಗಳು ಆಕೀಷ್‌ಗೆ “ಈ ಇಬ್ರಿಯರು ಯಾಕೆ ಇಲ್ಲಿಗೆ ಬಂದಿದ್ದಾರೆ?” ಅಂತ ಕೇಳಿದ್ರು. ಅದಕ್ಕೆ ಆಕೀಷ್ “ಇವನು ದಾವೀದ. ಇಸ್ರಾಯೇಲ್ ರಾಜನಾದ ಸೌಲನ ಸೇವಕ. ಇವನು ಒಂದು ವರ್ಷ ಅಥವಾ ಅದಕ್ಕಿಂತ ಜಾಸ್ತಿ ಸಮಯದಿಂದ ನನ್ನ ಜೊತೆ ಇದ್ದಾನೆ.+ ಇವನು ಓಡಿಬಂದ ದಿನದಿಂದ ಇವತ್ತಿನ ತನಕ ಇವನಲ್ಲಿ ನಾನು ಯಾವ ತಪ್ಪನ್ನೂ ನೋಡಿಲ್ಲ” ಅಂದ. 4 ಆದ್ರೆ ಫಿಲಿಷ್ಟಿಯರ ಅಧಿಕಾರಿಗಳಿಗೆ ಆಕೀಷನ ಮೇಲೆ ಕೋಪ ಬಂತು. ಅವರು “ಆ ಮನುಷ್ಯನನ್ನ ವಾಪಸ್ ಕಳಿಸಿಬಿಡು.+ ನೀನು ಅವನಿಗೆ ಕೊಟ್ಟ ಜಾಗಕ್ಕೆ ಹೋಗೋಕೆ ಹೇಳು. ಯುದ್ಧ ನಡಿವಾಗ ಅವನು ನಮ್ಮ ಮೇಲೆ ದಾಳಿ ಮಾಡಬಹುದು. ಹಾಗಾಗಿ ಯುದ್ಧಕ್ಕೆ ಅವನು ನಮ್ಮ ಜೊತೆ ಬರದ ಹಾಗೆ ನೋಡ್ಕೊ.+ ಅವನು ತನ್ನ ಪ್ರಭುವನ್ನ ಮೆಚ್ಚಿಸೋಕೆ ನಮ್ಮ ಜನ್ರ ತಲೆಗಳನ್ನ ತಗೊಂಡು ಹೋದ್ರೆ ಸಾಕಲ್ವಾ?
-