13 ತುತ್ತೂರಿ ಊದುತ್ತಿದ್ದವರು ಮತ್ತು ಗಾಯಕರು ಒಂದೇ ಸ್ವರದಲ್ಲಿ ಯೆಹೋವನನ್ನ ಹೊಗಳ್ತಾ, ಆತನಿಗೆ ಧನ್ಯವಾದ ಹೇಳ್ತಿದ್ರು. “ಯಾಕಂದ್ರೆ ಆತನು ಒಳ್ಳೆಯವನು, ಆತನ ಪ್ರೀತಿ ಶಾಶ್ವತ”+ ಅಂತ ಹೇಳ್ತಾ ಅವ್ರೆಲ್ಲ ಯೆಹೋವನನ್ನ ಹೊಗಳ್ತಿದ್ದಾಗ ತುತ್ತೂರಿ, ಝಲ್ಲರಿ ಮತ್ತು ಬೇರೆ ಸಂಗೀತ ವಾದ್ಯಗಳ ಶಬ್ದ ಆಕಾಶ ಮುಟ್ಟುತ್ತಿತ್ತು. ಆಗ ಯೆಹೋವನ ಆಲಯ ಮೋಡದಿಂದ ತುಂಬಿಕೊಳ್ತು.+