-
ಅರಣ್ಯಕಾಂಡ 31:50ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
50 ಹಾಗಾಗಿ ನಮಗೆ ಸಿಕ್ಕಿದ ಚಿನ್ನದ ಆಭರಣಗಳನ್ನ ಅಂದ್ರೆ ಕಡಗ, ಬಳೆ, ಮುದ್ರೆ ಉಂಗುರ, ಕಿವಿಯೋಲೆ, ಬೇರೆ ಆಭರಣಗಳನ್ನ ಯೆಹೋವನಿಗೆ ಅರ್ಪಿಸೋಕೆ ನಮ್ಮಲ್ಲಿ ಪ್ರತಿಯೊಬ್ರು ಬಯಸ್ತೀವಿ. ಯೆಹೋವನ ಮುಂದೆ ನಮಗಾಗಿ ಪ್ರಾಯಶ್ಚಿತ್ತ ಮಾಡೋಕೆ ಇವುಗಳನ್ನ ಕೊಡ್ತೀವಿ” ಅಂದ್ರು.
-
-
1 ಪೂರ್ವಕಾಲವೃತ್ತಾಂತ 18:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ತಕ್ಷಣ ತೋವಿ ದಾವೀದ ಹೇಗಿದ್ದಾನೆ ಅಂತ ವಿಚಾರಿಸೋಕೆ, ಹದದೆಜೆರನ ವಿರುದ್ಧ ಹೋರಾಡಿ ಅವನನ್ನ ಸೋಲಿಸಿದ್ದಕ್ಕಾಗಿ ಅಭಿನಂದನೆ ಹೇಳೋಕೆ ತನ್ನ ಮಗ ಹದೋರಾಮನನ್ನ* ಕಳಿಸಿದ. (ಯಾಕಂದ್ರೆ ತೋವಿ ವಿರುದ್ಧ ಹದದೆಜೆರ ಆಗಾಗ ಯುದ್ಧಕ್ಕೆ ಬರ್ತಿದ್ದ.) ಹದೋರಾಮ ದಾವೀದನಿಗಾಗಿ ಬೆಳ್ಳಿ, ಬಂಗಾರ, ತಾಮ್ರದ ಬೇರೆ ಬೇರೆ ವಸ್ತುಗಳನ್ನ ತಗೊಂಡು ಬಂದ. 11 ಇದರ ಜೊತೆಗೆ ರಾಜ ದಾವೀದ ತಾನು ತಗೊಂಡು ಬಂದಿದ್ದ ಬೆಳ್ಳಿಬಂಗಾರವನ್ನೂ ಯೆಹೋವನಿಗಾಗಿ ಮೀಸಲಿಟ್ಟ.+ ಆ ಬೆಳ್ಳಿಬಂಗಾರವನ್ನ ಎದೋಮಿಂದ, ಮೋವಾಬಿಂದ, ಅಮ್ಮೋನಿಯರಿಂದ,+ ಫಿಲಿಷ್ಟಿಯರಿಂದ,+ ಅಮಾಲೇಕ್ಯರಿಂದ+ ತಗೊಂಡು ಬಂದಿದ್ದ.
-