-
2 ಪೂರ್ವಕಾಲವೃತ್ತಾಂತ 7:12-14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ರಾತ್ರಿಹೊತ್ತಲ್ಲಿ ಯೆಹೋವ ಸೊಲೊಮೋನನಿಗೆ ಕಾಣಿಸ್ಕೊಂಡು+ ಹೀಗಂದನು “ನಾನು ನಿನ್ನ ಪ್ರಾರ್ಥನೆ ಕೇಳಿಸ್ಕೊಂಡೆ. ನಾನು ಈ ಜಾಗನ ನನಗೋಸ್ಕರ ಬಲಿ ಅರ್ಪಿಸೋ ಆಲಯವನ್ನಾಗಿ ಆರಿಸ್ಕೊಂಡಿದ್ದೀನಿ.+ 13 ನಾನು ಆಕಾಶವನ್ನು ಮುಚ್ಚಿ ಮಳೆಯಾಗದ ಹಾಗೆ ಮಾಡಿದಾಗ, ದೇಶನ ಹಾಳುಮಾಡೋಕೆ ಮಿಡತೆಗಳಿಗೆ ಆಜ್ಞೆ ಕೊಟ್ಟಾಗ ಮತ್ತು ನನ್ನ ಜನ್ರಿಗೆ ಅಂಟುರೋಗ ಬರೋ ಹಾಗೆ ಮಾಡಿದಾಗ, 14 ಒಂದುವೇಳೆ ನನ್ನ ಹೆಸ್ರಿರೋ ಜನ್ರು+ ತಮ್ಮನ್ನ ತಗ್ಗಿಸಿಕೊಂಡ್ರೆ,+ ಪ್ರಾರ್ಥಿಸಿ ನನ್ನನ್ನ ಹುಡುಕಿದ್ರೆ ಮತ್ತು ಕೆಟ್ಟ ದಾರಿನ ಬಿಟ್ಟು ತಿರುಗಿಕೊಂಡ್ರೆ+ ನಾನು ಸ್ವರ್ಗದಿಂದ ಅವ್ರ ಪ್ರಾರ್ಥನೆನ ಕೇಳಿಸಿಕೊಂಡು ಅವ್ರ ಪಾಪಗಳನ್ನ ಕ್ಷಮಿಸ್ತೀನಿ, ಅವ್ರ ದೇಶನ ಉದ್ಧಾರ ಮಾಡ್ತೀನಿ.+
-