36 ಹಾಗಾಗಿ ಯೆಹೋವ ಹೇಳೋದು ಏನಂದ್ರೆ
“ನಿನ್ನ ಮೊಕದ್ದಮೆಯಲ್ಲಿ ನಿನ್ನ ಪರ ವಾದಿಸ್ತಾ ಇದ್ದೀನಿ,+
ನಿನಗೋಸ್ಕರ ಸೇಡು ತೀರಿಸ್ತೀನಿ.+
ಅವ್ರ ಸಮುದ್ರವನ್ನ ಒಣಗಿಸ್ತೀನಿ, ಅವ್ರ ಬಾವಿಗಳನ್ನ ಬತ್ತಿಸಿಬಿಡ್ತೀನಿ.+
37 ಬಾಬೆಲ್ ಕಲ್ಲುಗಳ ಗುಡ್ಡೆ ಆಗುತ್ತೆ,+
ಗುಳ್ಳೆನರಿಗಳು ವಾಸ ಮಾಡೋ ಜಾಗ ಆಗುತ್ತೆ,+
ಅದಕ್ಕೆ ಎಂಥ ಗತಿ ಬರುತ್ತೆ ಅಂದ್ರೆ ಅದನ್ನ ನೋಡೋರು ಬೆಚ್ಚಿಬೀಳ್ತಾರೆ,
ಅವರು ಸೀಟಿ ಹೊಡೆದು ಅದನ್ನ ಅವಮಾನ ಮಾಡ್ತಾರೆ, ಅಲ್ಲಿ ಯಾರೂ ವಾಸ ಮಾಡಲ್ಲ.+