-
1 ಅರಸು 7:23-26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಆಮೇಲೆ ಅವನು ಅಚ್ಚಲ್ಲಿ ತಾಮ್ರ ಹೊಯ್ದು ಪಾತ್ರೆ ಮಾಡಿದ. ಅದನ್ನ “ಸಮುದ್ರ”* ಅಂತ ಕರೀತಿದ್ರು.+ ಅದು ವೃತ್ತಾಕಾರದಲ್ಲಿತ್ತು. ಅದ್ರ ಅಂಚಿಂದ ಅಂಚಿಗೆ 10 ಮೊಳ ಅಗಲ, 5 ಮೊಳ ಎತ್ರ ಇತ್ತು. ಅದ್ರ ಸುತ್ತಳತೆ 30 ಮೊಳ ಇತ್ತು.*+ 24 ಪಾತ್ರೆಯ ಅಂಚಿನ ಕೆಳಭಾಗದಲ್ಲಿ ಎರಡು ಸಾಲು ದುಂಡಗಿನ ಆಕಾರದ ಅಲಂಕಾರ ಮಾಡಿದ್ರು.+ ಈ ಅಲಂಕಾರ ಆ ಪಾತ್ರೆ ಸುತ್ತ ಮಾಡಿದ್ರು. ಒಂದೊಂದು ಮೊಳಕ್ಕೆ ಹತ್ತತ್ತು ದುಂಡಗಿನ ಆಕಾರದ ಅಲಂಕಾರಗಳನ್ನ ಮಾಡಿದ್ರು. ಆ ಪಾತ್ರೆನ ಅಚ್ಚಲ್ಲಿ ಹೊಯ್ದಾಗಲೇ ಈ ದುಂಡಗಿನ ಆಕಾರಗಳನ್ನೂ ಅಚ್ಚಲ್ಲಿ ಹೊಯ್ದಿದ್ರು. 25 ಆ ಪಾತ್ರೆನ ತಾಮ್ರದ 12 ಹೋರಿಗಳ+ ಮೇಲೆ ಇಟ್ಟಿದ್ರು. 3 ಹೋರಿ ಉತ್ತರಕ್ಕೆ, 3 ಹೋರಿ ಪಶ್ಚಿಮಕ್ಕೆ, 3 ಹೋರಿ ದಕ್ಷಿಣಕ್ಕೆ ಮತ್ತು 3 ಹೋರಿ ಪೂರ್ವಕ್ಕೆ ಮುಖ ಮಾಡಿದ್ವು. ಆ ಎಲ್ಲ ಹೋರಿಗಳ ಹಿಂಭಾಗ ಒಳಗಡೆಗೆ ಇತ್ತು. ಅವುಗಳ ಬೆನ್ನಿನ ಮೇಲೆ ಆ ತಾಮ್ರದ ಪಾತ್ರೆ ಇತ್ತು. 26 ಆ ಪಾತ್ರೆ ನಾಲ್ಕು ಬೆರಳಿನಷ್ಟು* ದಪ್ಪ ಇತ್ತು. ಅದ್ರ ಅಂಚು ಲೋಟದ ಅಂಚಿನ ತರ ಇತ್ತು. ನೋಡೋಕೆ ಅದು ಅರಳಿದ ಲಿಲಿ ಹೂವಿನ ತರ ಇತ್ತು. ಅದ್ರಲ್ಲಿ 2,000 ಬತ್* ಅಳತೆ ನೀರು ಹಿಡಿತಿತ್ತು.
-