-
ವಿಮೋಚನಕಾಂಡ 23:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ನೀವು ಅವರ ಜೊತೆ, ಅವರ ದೇವರುಗಳ ಜೊತೆ ಒಪ್ಪಂದ ಮಾಡ್ಕೊಬಾರದು.+
-
-
ವಿಮೋಚನಕಾಂಡ 34:15, 16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ನೀವು ಹೋಗೋ ದೇಶದ ಜನ್ರ ಜೊತೆ ಒಪ್ಪಂದ ಮಾಡ್ಕೊಳ್ಳಬೇಡಿ. ಈ ವಿಷ್ಯದಲ್ಲಿ ತುಂಬ ಹುಷಾರಾಗಿ ಇರಿ. ಒಪ್ಪಂದ ಮಾಡ್ಕೊಂಡ್ರೆ ಅವರು ತಮ್ಮ ದೇವರುಗಳಿಗೆ ಪೂಜೆ ಮಾಡುವಾಗ, ಬಲಿ ಕೊಡುವಾಗ+ ನಿಮ್ಮನ್ನೂ ಕರೀತಾರೆ. ಆಗ ಅವರು ಬಲಿಯಾಗಿ ಕೊಟ್ಟಿದ್ದನ್ನ ನೀವು ತಿಂತೀರ.+ 16 ಖಂಡಿತ ನಿಮ್ಮ ಗಂಡುಮಕ್ಕಳಿಗಾಗಿ ಅವರಿಂದ ಹೆಣ್ಣುಮಕ್ಕಳನ್ನ ತರ್ತಿರ.+ ಸೊಸೆಯರಾಗಿ ಬರೋರು ಅವರ ದೇವರುಗಳನ್ನ ಪೂಜೆ ಮಾಡೋದಷ್ಟೇ ಅಲ್ಲ ನಿಮ್ಮ ಮಕ್ಕಳೂ ಆ ದೇವರುಗಳಿಗೆ ಪೂಜೆ ಮಾಡೋ ತರ ಮಾಡ್ತಾರೆ.+
-
-
ಧರ್ಮೋಪದೇಶಕಾಂಡ 7:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನಿಮ್ಮ ಹೆಣ್ಣು ಮಕ್ಕಳನ್ನ ಅವ್ರ ಗಂಡು ಮಕ್ಕಳಿಗೆ ಕೊಡಬಾರದು. ಅವ್ರ ಹೆಣ್ಣು ಮಕ್ಕಳನ್ನ ನಿಮ್ಮ ಗಂಡು ಮಕ್ಕಳಿಗೆ ತರಬಾರದು. ಹೀಗೆ ಅವ್ರ ಜೊತೆ ಸಂಬಂಧ* ಬೆಳೆಸಬಾರದು.+ 4 ಯಾಕಂದ್ರೆ ಅವರು ನಿಮ್ಮ ಮಕ್ಕಳನ್ನ ನಮ್ಮ ದೇವರಿಂದ ದೂರಮಾಡಿ ಬೇರೆ ದೇವರುಗಳನ್ನ ಆರಾಧನೆ ಮಾಡೋ ತರ ಮಾಡ್ತಾರೆ.+ ಆಗ ನಿಮ್ಮ ಮೇಲೆ ಯೆಹೋವನ ಕೋಪ ಹೊತ್ತಿ ಉರಿಯುತ್ತೆ, ನಿಮ್ಮನ್ನ ನಾಶ ಮಾಡೋಕೆ ಆತನಿಗೆ ಒಂದು ಕ್ಷಣ ಸಾಕು.+
-
-
ಯೆಹೋಶುವ 23:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನೀವು ಆತನಿಗೆ ಬೆನ್ನುಹಾಕಿ ನಿಮ್ಮ ಮಧ್ಯ ಇರೋ ಬೇರೆ ಜನಾಂಗಗಳ+ ಜೊತೆ ಸೇರಿ ಅವ್ರ ಜೊತೆ ಮದುವೆ ಸಂಬಂಧ ಬೆಳೆಸಿದ್ರೆ,+ ಅವ್ರ ಸಹವಾಸ ಮಾಡಿದ್ರೆ, 13 ನಿಮ್ಮ ದೇವರಾದ ಯೆಹೋವ ಈ ಜನಾಂಗಗಳನ್ನ ನಿಮ್ಮ ಮುಂದಿಂದ ಓಡಿಸಲ್ಲ*+ ಅನ್ನೋದನ್ನ ಮನಸ್ಸಲ್ಲಿಡಿ. ನಿಮ್ಮ ದೇವರಾದ ಯೆಹೋವ ಕೊಟ್ಟಿರೋ ಈ ಒಳ್ಳೇ ದೇಶದಿಂದ ನಾಶ ಆಗೋ ತನಕ ಅವರು ನಿಮಗೆ ಉರ್ಲಾಗಿ, ಬಲೆಯಾಗಿ, ನಿಮ್ಮ ಪಕ್ಕೆಗೆ ಹೊಡಿಯೋ ಚಾಟಿಯಾಗಿ,+ ನಿಮ್ಮ ಕಣ್ಣಿಗೆ ಚುಚ್ಚೋ ಮುಳ್ಳಾಗಿ ಇರ್ತಾರೆ.
-