-
1 ಪೂರ್ವಕಾಲವೃತ್ತಾಂತ 29:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಈ ಕಾಣಿಕೆಗಳನ್ನ ಮನಸಾರೆ ಕೊಟ್ಟು ಜನ್ರು ತುಂಬ ಖುಷಿಪಟ್ರು. ಯಾಕಂದ್ರೆ ಅವರು ಆ ಕಾಣಿಕೆಗಳನ್ನ ಪೂರ್ಣ ಹೃದಯದಿಂದ ಯೆಹೋವನಿಗೆ ಕೊಡ್ತಿದ್ರು.+ ರಾಜ ದಾವೀದನಿಗೂ ತುಂಬ ಖುಷಿ ಆಯ್ತು.
-
-
ಎಜ್ರ 7:14-16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಯಾಕಂದ್ರೆ ರಾಜನ, ಅವನ ಏಳು ಸಲಹೆಗಾರರ ಕಡೆಯಿಂದ ನಿನ್ನನ್ನ ಯೆಹೂದಕ್ಕೆ, ಯೆರೂಸಲೇಮಿಗೆ ಕಳಿಸ್ತಾ ಇದ್ದೀನಿ. ಅಲ್ಲಿಗೆ ಹೋಗಿ ನಿನ್ನ ಹತ್ರ ಇರೋ ದೇವರ ನಿಯಮ ಪುಸ್ತಕದ ಪ್ರಕಾರ ಜನ ನಡೀತಾ ಇದ್ದಾರಾ ಇಲ್ವಾ ಅಂತ ತನಿಖೆ ಮಾಡಿನೋಡು. 15 ರಾಜ, ಅವನ ಸಲಹೆಗಾರರು ಮನಸಾರೆ ಇಸ್ರಾಯೇಲ್ ದೇವ್ರಿಗೆ ಕೊಟ್ಟಿರೋ ಬೆಳ್ಳಿಬಂಗಾರವನ್ನ ಆತನ ಜಾಗವಾಗಿರೋ ಯೆರೂಸಲೇಮಿಗೆ ತಗೊಂಡು ಹೋಗು. 16 ಇದ್ರ ಜೊತೆ ಇಡೀ ಬಾಬೆಲಿನ ಪ್ರದೇಶದಿಂದ* ನಿನಗೆ ಸಿಕ್ಕಿರೋ ಎಲ್ಲ ಬೆಳ್ಳಿಬಂಗಾರವನ್ನ, ಯೆರೂಸಲೇಮಲ್ಲಿರೋ ತಮ್ಮ ದೇವರ ಆಲಯಕ್ಕಾಗಿ ಜನರು, ಪುರೋಹಿತರು ಮನಸಾರೆ ಕೊಟ್ಟಿರೋ ಉಡುಗೊರೆಯನ್ನೂ ತಗೊಂಡು ಹೋಗು.+
-