ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 24:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ತನ್ನ ಸೇವಕರು ಯೆರೂಸಲೇಮಿಗೆ ಮುತ್ತಿಗೆ ಹಾಕ್ತಿರುವಾಗ ಬಾಬೆಲಿನ ರಾಜ ನೆಬೂಕದ್ನೆಚ್ಚರ ಆ ಪಟ್ಟಣಕ್ಕೆ ಬಂದ.

  • 2 ಅರಸು 24:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಆಮೇಲೆ ನೆಬೂಕದ್ನೆಚ್ಚರ ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯ ಖಜಾನೆಯಲ್ಲಿದ್ದ ಎಲ್ಲ ನಿಕ್ಷೇಪಗಳನ್ನ ತಗೊಂಡ.+ ಇಸ್ರಾಯೇಲ್‌ ರಾಜ ಸೊಲೊಮೋನ ಯೆಹೋವನ ಆಲಯದಲ್ಲಿ ಮಾಡಿಸಿಟ್ಟಿದ್ದ ಎಲ್ಲ ಬಂಗಾರದ ಪಾತ್ರೆಗಳನ್ನ ಅವನು ಚೂರುಚೂರು ಮಾಡಿದ.+ ಇದೆಲ್ಲ ಯೆಹೋವ ಹೇಳಿದ ಹಾಗೇ ನಡಿತು.

  • 2 ಪೂರ್ವಕಾಲವೃತ್ತಾಂತ 36:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ನೆಬೂಕದ್ನೆಚ್ಚರ ಯೆಹೋವನ ಆಲಯದಿಂದ ಕೆಲವು ಪಾತ್ರೆಗಳನ್ನ ಬಾಬೆಲಿಗೆ ತಗೊಂಡು ಹೋಗಿ ತನ್ನ ಅರಮನೆಯಲ್ಲಿ ಇಟ್ಟುಕೊಂಡ.+

  • 2 ಪೂರ್ವಕಾಲವೃತ್ತಾಂತ 36:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಸತ್ಯ ದೇವರ ಆಲಯದಲ್ಲಿದ್ದ ಚಿಕ್ಕ ದೊಡ್ಡ ಹೀಗೆ ಎಲ್ಲ ಪಾತ್ರೆಗಳನ್ನ, ಯೆಹೋವನ ಆಲಯದಲ್ಲಿದ್ದ ನಿಕ್ಷೇಪಗಳನ್ನ, ರಾಜನ ಮತ್ತು ಅವನ ಅಧಿಕಾರಿಗಳ ನಿಕ್ಷೇಪಗಳನ್ನ ಕಸ್ದೀಯರ ರಾಜ ಬಾಬೆಲಿಗೆ ತಗೊಂಡು ಹೋದ.+

  • ಎಜ್ರ 6:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ನೆಬೂಕದ್ನೆಚ್ಚರ ಯೆರೂಸಲೇಮಿನ ದೇವಾಲಯದಿಂದ ತಗೊಂಡು ಹೋಗಿ ಬಾಬೆಲಿನ ದೇವಾಲಯದಲ್ಲಿ ಇಟ್ಟಿರೋ ಬೆಳ್ಳಿಬಂಗಾರದ ಪಾತ್ರೆಗಳನ್ನ+ ವಾಪಸ್‌ ಕೊಡಬೇಕು. ಅದನ್ನ ಅದ್ರ ಸ್ಥಾನದಲ್ಲಿ ಅಂದ್ರೆ ಯೆರೂಸಲೇಮಿನ ದೇವಾಲಯದಲ್ಲಿ ಇಡಬೇಕು.’ +

  • ದಾನಿಯೇಲ 1:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 1 ಯೆಹೂದದ ರಾಜ ಯೆಹೋಯಾಕೀಮನ+ ಆಳ್ವಿಕೆಯ ಮೂರನೇ ವರ್ಷದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ ಯೆರೂಸಲೇಮಿಗೆ ಬಂದು ಅದನ್ನ ವಶ ಮಾಡ್ಕೊಂಡ.+ 2 ಸ್ವಲ್ಪ ಸಮಯ ಆದ್ಮೇಲೆ ಯೆಹೋವ ಯೆಹೂದದ ರಾಜ ಯೆಹೋಯಾಕೀಮನನ್ನ, ಸತ್ಯ ದೇವರ ಆಲಯದ ಕೆಲವು ಪಾತ್ರೆಗಳನ್ನ ನೆಬೂಕದ್ನೆಚ್ಚರನಿಗೆ ಒಪ್ಪಿಸಿದ.+ ನೆಬೂಕದ್ನೆಚ್ಚರ ಆ ಪಾತ್ರೆಗಳನ್ನ ಶಿನಾರ್‌*+ ದೇಶಕ್ಕೆ ತಗೊಂಡು ಹೋಗಿ ತನ್ನ ದೇವರ ಮಂದಿರದ ಖಜಾನೆಯಲ್ಲಿ ಇಟ್ಟ.+

  • ದಾನಿಯೇಲ 5:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ದ್ರಾಕ್ಷಾಮದ್ಯದ ಮತ್ತಲ್ಲಿದ್ದ ಬೇಲ್ಶಚ್ಚರ ಯೆರೂಸಲೇಮ್‌ ದೇವಾಲಯದಿಂದ ಅವನ ಅಪ್ಪ ನೆಬೂಕದ್ನೆಚ್ಚರ ತಂದಿದ್ದ ಚಿನ್ನ, ಬೆಳ್ಳಿಯ ಪಾತ್ರೆಗಳನ್ನ ತನ್ನ ಮುಂದೆ ತರೋಕೆ ಹೇಳಿದ.+ ಅವನು, ಅವನ ಪ್ರಧಾನರು, ಅವನ ಉಪಪತ್ನಿಯರು, ಬೇರೆ ಪತ್ನಿಯರು ಆ ಪಾತ್ರೆಗಳಲ್ಲಿ ದ್ರಾಕ್ಷಾಮದ್ಯ ಕುಡಿಯೋಕೆ ಅದನ್ನ ತರಿಸಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ