11 ಯೋಬನಿಗೆ ಬಂದ ಎಲ್ಲ ಕಷ್ಟಗಳ ಬಗ್ಗೆ ಅವನ ಮೂವರು ಸ್ನೇಹಿತರು ಕೇಳಿಸ್ಕೊಂಡ್ರು. ಅವರು ಯಾರಂದ್ರೆ ತೇಮಾನ್ಯನಾದ ಎಲೀಫಜ,+ ಶೂಹ್ಯನಾದ+ ಬಿಲ್ದದ,+ ನಾಮಾಥ್ಯನಾದ ಚೋಫರ.+ ಈ ಮೂವರು ಯೋಬನನ್ನ ನೋಡ್ಕೊಂಡು ಬರೋಕೆ ತಮ್ಮ ತಮ್ಮ ಊರಿಂದ ಹೊರಟ್ರು. ಅವರು ಒಟ್ಟಿಗೆ ಬಂದು ಯೋಬನಿಗೆ ಸಮಾಧಾನದ ಮಾತನ್ನ ಹೇಳಬೇಕು ಅಂತ ನೆನಸಿದ್ರು.