4 ಪ್ರವಾದಿಗಳ ಗಂಡು ಮಕ್ಕಳಲ್ಲಿ+ ಒಬ್ಬನ ಹೆಂಡತಿ ಅಳ್ತಾ ಎಲೀಷನ ಹತ್ರ ಬಂದು “ನಿನ್ನ ಸೇವಕನಾಗಿದ್ದ ನನ್ನ ಗಂಡ ತೀರಿಹೋದ. ಅವನಿಗೆ ಯಾವಾಗ್ಲೂ ಯೆಹೋವನ ಮೇಲೆ ಭಯಭಕ್ತಿ ಇತ್ತು+ ಅಂತ ನಿನಗೆ ಚೆನ್ನಾಗಿ ಗೊತ್ತು. ಆದ್ರೆ ಅವನು ಒಬ್ಬನ ಹತ್ರ ಸಾಲಮಾಡಿದ್ದ. ಸಾಲ ಕೊಟ್ಟವನು ನನ್ನ ಇಬ್ರು ಮಕ್ಕಳನ್ನ ತನ್ನ ದಾಸರನ್ನಾಗಿ ಕರ್ಕೊಂಡು ಹೋಗೋಕೆ ಬಂದಿದ್ದಾನೆ” ಅಂದಳು.