17 ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಬೇರೆಲ್ಲ ದೇವರುಗಳಿಗಿಂತ ತುಂಬಾ ದೊಡ್ಡವನು,+ ಒಡೆಯರ ಒಡೆಯನು. ಶ್ರೇಷ್ಠ, ಬಲಶಾಲಿ, ಭಯವಿಸ್ಮಯ ಹುಟ್ಟಿಸೋ ದೇವರು. ಆತನು ಯಾರಿಗೂ ಭೇದಭಾವ ಮಾಡಲ್ಲ.+ ಲಂಚ ತಗೊಳ್ಳಲ್ಲ. 18 ಅನಾಥ ಮಕ್ಕಳಿಗೆ, ವಿಧವೆಯರಿಗೆ+ ಆತನು ನ್ಯಾಯ ಕೊಡಿಸ್ತಾನೆ. ನಿಮ್ಮ ಮಧ್ಯ ಇರೋ ವಿದೇಶಿಯರನ್ನ+ ಪ್ರೀತಿಸ್ತಾನೆ, ಅವ್ರಿಗೆ ಊಟಬಟ್ಟೆ ಕೊಡ್ತಾನೆ.