ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಅರಸು 18:45
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 45 ಅದೇ ಸಮಯಕ್ಕೆ ದಟ್ಟವಾದ ಮೋಡ ಕವಿದು ಗಾಳಿ ಬೀಸಿ ಜೋರು ಮಳೆ ಶುರು ಆಯ್ತು.+ ಅಹಾಬ ರಥವನ್ನ ಓಡಿಸ್ಕೊಂಡು ಇಜ್ರೇಲಿಗೆ ಹೋದ.+

  • ಯೋಬ 36:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ಆಕಾಶದಲ್ಲಿ ಹರಡಿರೋ ಮೋಡಗಳ ಬಗ್ಗೆ ಯಾರಿಗಾದ್ರೂ ಅರ್ಥ ಮಾಡ್ಕೊಳ್ಳೋಕೆ ಆಗುತ್ತಾ?

      ಆತನ ಡೇರೆ ಒಳಗಿಂದ ಬರೋ ಗುಡುಗಿನ ಬಗ್ಗೆ ಯಾರಿಗಾದ್ರೂ ತಿಳ್ಕೊಳ್ಳೋಕೆ ಆಗುತ್ತಾ?+

  • ಯೋಬ 36:31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಇದೆಲ್ಲದ್ರಿಂದ ಆತನು ಜನ್ರನ್ನ ಚೆನ್ನಾಗಿ ನೋಡ್ಕೊಳ್ತಾನೆ,*

      ಅವ್ರಿಗೆ ಹೇರಳವಾಗಿ ಆಹಾರ ಕೊಡ್ತಾನೆ.+

  • ಯೋಬ 38:25-27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಪ್ರವಾಹಕ್ಕೆ ಕಾಲುವೆ ತೋಡಿದವನು ಯಾರು?

      ಕಾರ್ಮೋಡಗಳಿಂದ, ಸಿಡಿಲಿಂದ ಕೂಡಿದ ಬಿರುಮಳೆಗೆ ದಾರಿ ಮಾಡಿದವನು ಯಾರು?+

      26 ಯಾರೂ ಇಲ್ಲದ ಪ್ರದೇಶದಲ್ಲಿ ಮಳೆ ಆಗೋ ತರ ಮಾಡಿದವನು ಯಾರು?

      ಜನ್ರಿಲ್ಲದ ಕಾಡಲ್ಲಿ ಮಳೆ ಸುರಿಸಿದವನು ಯಾರು?+

      27 ಬಂಜರುಭೂಮಿಯ ದಾಹ ತಣಿಸಿದವನು ಯಾರು?

      ಅಲ್ಲಿ ಹುಲ್ಲು ಬೆಳೆಯೋ ತರ ಮಾಡಿದವನು ಯಾರು?+

  • ಯಾಕೋಬ 5:17, 18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಎಲೀಯನೂ ನಮ್ಮ ತರ ಭಾವನೆಗಳಿದ್ದ ಮನುಷ್ಯನಾಗಿದ್ರೂ ಅವನು ಪ್ರಾರ್ಥನೆ ಮಾಡಿದಾಗ ಉತ್ತರ ಸಿಕ್ತು. ಮಳೆ ಆಗಬಾರದು ಅಂತ ಅಂಗಲಾಚಿ ಪ್ರಾರ್ಥನೆ ಮಾಡಿದಾಗ ಆ ದೇಶದಲ್ಲಿ ಮೂರೂವರೆ ವರ್ಷ ಮಳೆನೇ ಆಗಲಿಲ್ಲ.+ 18 ಆಮೇಲೆ ಅವನು ಮತ್ತೆ ಪ್ರಾರ್ಥನೆ ಮಾಡಿದ. ಆಗ ಮಳೆ ಬಂತು, ಭೂಮಿ ಬೆಳೆ ಕೊಡ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ