10 ಹಾನಿಕರ ನಿಯಮಗಳನ್ನ ಮಾಡುವವರ,+
ಹೊರೆಯಾಗೋ ಆಜ್ಞೆಗಳನ್ನ ಸಿದ್ಧಪಡಿಸುವವರ ಗತಿಯನ್ನ ಏನು ಹೇಳಲಿ.
2 ಬಡವ್ರಿಗೆ ಸಿಗಬೇಕಾದ ಕಾನೂನುಬದ್ಧ ಹಕ್ಕನ್ನ ಕೊಡೋಕೆ ಒಪ್ಪದವರ,
ನನ್ನ ಜನ್ರಲ್ಲಿರೋ ದೀನರಿಗೆ ನ್ಯಾಯ ಸಿಗದ ಹಾಗೆ ಮಾಡುವವರ,+
ವಿಧವೆಯರ ಆಸ್ತಿ ನುಂಗಿ, ತಂದೆಯಿಲ್ಲದ ಮಕ್ಕಳನ್ನ ಕೊಳ್ಳೆ ಹೊಡೆಯುವವರ+ ಗತಿಯನ್ನ ಏನು ಹೇಳಲಿ.