ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 34:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಮನುಷ್ಯ ತಾನೇನು ಮಾಡ್ತಾನೋ ಅದ್ರ ಪರಿಣಾಮ ಅನುಭವಿಸೋ ತರ ದೇವರು ಮಾಡ್ತಾನೆ,+

      ಅವನ ನಡತೆಯ ಪರಿಣಾಮವನ್ನ ಅನುಭವಿಸ್ಲಿ ಅಂತ ಬಿಡ್ತಾನೆ.

  • ಜ್ಞಾನೋಕ್ತಿ 24:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 “ನಮಗೆ ಇದ್ರ ಬಗ್ಗೆ ಗೊತ್ತಿರಲಿಲ್ಲ” ಅಂತ ನೀನು ಹೇಳಿದ್ರೆ

      ಹೃದಯ* ಪರಿಶೋಧಿಸೋ ದೇವರಿಗೆ ಅದು ಗೊತ್ತಾಗಲ್ವಾ?+

      ಹೌದು, ನಿನ್ನನ್ನ ಗಮನಿಸೋ ದೇವರಿಗೆ ಎಲ್ಲ ಗೊತ್ತಾಗುತ್ತೆ.

      ಪ್ರತಿಯೊಬ್ರೂ ಏನೇನು ಮಾಡ್ತಾರೋ ಅದಕ್ಕೆ ತಕ್ಕ ಫಲ ಕೊಡ್ತಾನೆ.+

  • ರೋಮನ್ನರಿಗೆ 2:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಆತನು ಎಲ್ರಿಗೂ ಅವ್ರ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡ್ತಾನೆ.+

  • 2 ಕೊರಿಂಥ 5:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ನಾವೆಲ್ಲ ಕ್ರಿಸ್ತನ ನ್ಯಾಯಾಸನದ ಮುಂದೆ ನಿಲ್ಲಬೇಕು. ಈ ದೇಹದಲ್ಲಿರುವಾಗ ಒಳ್ಳೇದು ಮಾಡಿರಲಿ ಕೆಟ್ಟದು ಮಾಡಿರಲಿ ಅದಕ್ಕೆ ತಕ್ಕ ಹಾಗೆ ಪ್ರತಿಯೊಬ್ಬನಿಗೂ ತೀರ್ಪಾಗುತ್ತೆ.+

  • ಗಲಾತ್ಯ 6:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಮೋಸಹೋಗಬೇಡಿ,* ಯಾರೂ ದೇವರಿಗೆ ಮೋಸ ಮಾಡಕ್ಕಾಗಲ್ಲ.* ಯಾಕಂದ್ರೆ ಒಬ್ಬನು ಏನು ಬಿತ್ತುತ್ತಾನೋ ಅದನ್ನೇ ಕೊಯ್ತಾನೆ.+

  • 2 ತಿಮೊತಿ 4:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ತಾಮ್ರದ ಕೆಲಸಮಾಡೋ ಅಲೆಕ್ಸಾಂದ್ರ ನನಗೆ ತುಂಬ ಕೆಟ್ಟದು ಮಾಡಿದ್ದಾನೆ. ಅದಕ್ಕಾಗಿ ಯೆಹೋವ* ಅವನಿಗೆ ತಕ್ಕ ಶಿಕ್ಷೆ ಕೊಡ್ತಾನೆ.+

  • ಪ್ರಕಟನೆ 20:12, 13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಸಿಂಹಾಸನದ ಮುಂದೆ ಸತ್ತವರು ನಿಂತಿರೋದನ್ನ ನೋಡ್ದೆ. ಅವ್ರಲ್ಲಿ ದೊಡ್ಡವರು, ಚಿಕ್ಕವರು ಇದ್ರು. ಆಗ ದೇವರು ಸುರುಳಿಗಳನ್ನ ತೆರೆದನು. ಆಮೇಲೆ ಇನ್ನೊಂದು ಸುರುಳಿಯನ್ನ ದೇವರು ತೆರೆದನು. ಅದು ಜೀವದ ಸುರುಳಿ.+ ಸುರುಳಿಗಳಲ್ಲಿ ಇದ್ದ ವಿಷ್ಯಗಳ ಆಧಾರದ ಮೇಲೆ ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಆತನು ಸತ್ತವ್ರಿಗೆ ನ್ಯಾಯತೀರ್ಪು ಕೊಟ್ಟನು.+ 13 ಸಮುದ್ರ ತನ್ನೊಳಗೆ ಇದ್ದ ಸತ್ತವ್ರನ್ನ ಒಪ್ಪಿಸ್ತು. ಸಾವು ಮತ್ತು ಸಮಾಧಿನೂ* ಸತ್ತವ್ರನ್ನ ಒಪ್ಪಿಸಿದ್ವು. ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಎಲ್ರಿಗೂ ನ್ಯಾಯತೀರ್ಪು ಆಯ್ತು.+

  • ಪ್ರಕಟನೆ 22:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ‘ನೋಡು, ನಾನು ಬೇಗ ಬರ್ತಾ ಇದ್ದೀನಿ. ಎಲ್ರಿಗೂ ಅವ್ರವ್ರ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ