15 ಗಾಯಕರಾಗಿದ್ದ ಆಸಾಫನ+ ಮಕ್ಕಳು ದಾವೀದನ, ಆಸಾಫನ,+ ಹೇಮಾನನ ಮತ್ತು ದಾವೀದನಿಗಾಗಿ ದೇವದರ್ಶನ ನೋಡ್ತಿದ್ದ ಯೆದುತೂನನ+ ಆಜ್ಞೆ ತರ ಅವರವರ ಸ್ಥಾನದಲ್ಲಿ ನಿಂತಿದ್ರು.+ ಬಾಗಿಲು ಕಾಯುವವರು ಬೇರೆಬೇರೆ ಬಾಗಿಲ ಹತ್ರ ನಿಂತಿದ್ರು.+ ಇವರ ಸಹೋದರರಾದ ಲೇವಿಯರು ಇವರಿಗೋಸ್ಕರ ಪಸ್ಕದ ಅಡುಗೆಯನ್ನ ತಯಾರಿಸಿದ್ರಿಂದ ಇವರು ತಮ್ಮ ಸೇವೆಯನ್ನ ಬಿಟ್ಟುಬರೋ ಅವಶ್ಯಕತೆ ಇರಲಿಲ್ಲ.