-
ವಿಮೋಚನಕಾಂಡ 23:30ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ನಿಮ್ಮ ವಂಶ ವೃದ್ಧಿಯಾಗಿ ನೀವು ದೇಶವನ್ನ ಸ್ವಾಧೀನ ಮಾಡ್ಕೊಳ್ಳೋ ತನಕ ನಾನು ಅವರನ್ನ ಸ್ವಲ್ಪಸ್ವಲ್ಪವಾಗಿ ನಿಮ್ಮ ಎದುರಿಂದ ಓಡಿಸ್ತೀನಿ.+
-
-
ಯೆಹೋಶುವ 24:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಹಾಗಾಗಿ ನೀವು ಹೋಗೋ ಮುಂಚೆನೇ ನಾನು ಅವ್ರಲ್ಲಿ ನಿರಾಶೆ* ಹುಟ್ಟಿಸಿದೆ. ಆ ನಿರಾಶೆ ಅಮೋರಿಯರ ಇಬ್ಬರು ರಾಜರನ್ನ ನಿಮ್ಮ ಮುಂದಿಂದ ಓಡಿಸಿದ ತರಾನೇ ಇವ್ರನ್ನೂ ಓಡಿಸಿಬಿಡ್ತು.+ ಇದು ನಿಮ್ಮ ಕತ್ತಿಯಿಂದಾಗ್ಲಿ ನಿಮ್ಮ ಬಿಲ್ಲಿಂದಾಗ್ಲಿ ಆಗಲಿಲ್ಲ.+ 13 ಹೀಗೆ ನೀವು ಕಷ್ಟಪಟ್ಟು ಸಂಪಾದಿಸದ ಪ್ರದೇಶನ, ನೀವು ಕಟ್ಟದ ಪಟ್ಟಣಗಳನ್ನ ನಿಮಗೆ ಕೊಟ್ಟೆ.+ ಈಗ ನೀವು ಅವುಗಳಲ್ಲಿ ಇದ್ದೀರ. ನೀವು ನೆಡದ ದ್ರಾಕ್ಷಿಯ ತೋಟದಿಂದ, ಆಲಿವ್ ತೋಟದಿಂದ ಹಣ್ಣುಗಳನ್ನ ತಿಂತಿದ್ದೀರ.’+
-
-
1 ಅರಸು 4:25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಸೊಲೊಮೋನ ಆಳಿದ ಕಾಲದಲ್ಲೆಲ್ಲ ದಾನಿನಿಂದ ಹಿಡಿದು ಬೇರ್ಷೆಬದ ತನಕ ಯೆಹೂದದಲ್ಲಿದ್ದ ಮತ್ತು ಇಸ್ರಾಯೇಲಿನಲ್ಲಿದ್ದ ಜನ್ರು ಸುರಕ್ಷಿತವಾಗಿದ್ರು. ಅವರು ತಮ್ಮತಮ್ಮ ದ್ರಾಕ್ಷಿ ತೋಟದ ಮತ್ತು ಅಂಜೂರದ ಮರದ ನೆರಳಲ್ಲಿ ಚಿಂತೆ ಇಲ್ಲದೆ ವಾಸ ಮಾಡ್ತಿದ್ರು.
-