9 ರಾಜ ಹಿಜ್ಕೀಯ ಆಳ್ತಿದ್ದ ನಾಲ್ಕನೇ ವರ್ಷದಲ್ಲಿ ಅಂದ್ರೆ ಇಸ್ರಾಯೇಲಿನ ರಾಜನೂ ಏಲಾನ ಮಗನೂ ಆದ ಹೋಷೇಯ+ ಆಳ್ತಿದ್ದ ಏಳನೇ ವರ್ಷದಲ್ಲಿ ಅಶ್ಶೂರ್ಯರ ರಾಜ ಶಲ್ಮನೆಸೆರ ಸಮಾರ್ಯದ ಮೇಲೆ ದಾಳಿ ಮಾಡಿ ಅದಕ್ಕೆ ಮುತ್ತಿಗೆ ಹಾಕಿದ.+
24ಯೆಹೋಯಾಕೀಮನ ಕಾಲದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ+ ಯೆಹೂದದ ಮೇಲೆ ದಾಳಿ ಮಾಡಿದ. ಯೆಹೋಯಾಕೀಮ ಮೂರು ವರ್ಷ ಅವನ ಅಧೀನದಲ್ಲಿದ್ದ. ಆಮೇಲೆ ಅವನು ನೆಬೂಕದ್ನೆಚ್ಚರನ ವಿರುದ್ಧ ತಿರುಗಿಬಿದ್ದ.
25ಚಿದ್ಕೀಯ ಆಳ್ತಿದ್ದ ಒಂಬತ್ತನೇ ವರ್ಷದ ಹತ್ತನೇ ತಿಂಗಳಿನ ಹತ್ತನೇ ದಿನದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ+ ತನ್ನೆಲ್ಲ ಸೈನ್ಯದ ಜೊತೆ ಯೆರೂಸಲೇಮಿನ ಮೇಲೆ ದಾಳಿ ಮಾಡೋಕೆ ಬಂದ.+ ಅವ್ರೆಲ್ಲ ಅದ್ರ ಮುಂದೆ ಪಾಳೆಯ ಹೂಡಿ ಅದ್ರ ಸುತ್ತಲೂ ಇಳಿಜಾರು ದಿಬ್ಬ ಕಟ್ಟಿದ್ರು.+
32ಹಿಜ್ಕೀಯ ನಂಬಿಗಸ್ತಿಕೆಯಿಂದ+ ಈ ಎಲ್ಲ ಕೆಲಸಗಳನ್ನ ಮಾಡಿ ಮುಗಿಸಿದ ಮೇಲೆ ಅಶ್ಶೂರ್ಯರ ರಾಜ ಸನ್ಹೇರೀಬ ಯೆಹೂದದ ಮೇಲೆ ದಾಳಿ ಮಾಡಿದ. ಭದ್ರ ಕೋಟೆಗಳಿದ್ದ ಪಟ್ಟಣಗಳ ಗೋಡೆಗಳನ್ನ ಒಡೆದು ಅವುಗಳನ್ನ ವಶ ಮಾಡ್ಕೊಬೇಕಂತ ಹೀಗೆ ಮಾಡಿದ.+