12 ಬಾಬೆಲಿನ ರಾಜ ನೆಬೂಕದ್ನೆಚ್ಚರನ ಆಳ್ವಿಕೆಯ 19ನೇ ವರ್ಷದ ಐದನೇ ತಿಂಗಳ ಹತ್ತನೇ ದಿನ ಅವನ ಸೇವಕ ಕಾವಲುಗಾರರ ಮುಖ್ಯಸ್ಥ ಆಗಿದ್ದ ನೆಬೂಜರದಾನ ಯೆರೂಸಲೇಮಿನ ಒಳಗೆ ಬಂದ.+ 13 ಅವನು ಯೆಹೋವನ ಆಲಯವನ್ನ,+ ರಾಜನ ಅರಮನೆಯನ್ನ, ಯೆರೂಸಲೇಮಲ್ಲಿದ್ದ ಎಲ್ಲ ಮನೆಗಳನ್ನ ಸುಟ್ಟುಹಾಕಿದ. ಆ ಪಟ್ಟಣದಲ್ಲಿದ್ದ ಎಲ್ಲ ದೊಡ್ಡ ಮನೆಗಳನ್ನ ಸಹ ಸುಟ್ಟುಹಾಕಿದ.