-
ವಿಮೋಚನಕಾಂಡ 34:6, 7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಯೆಹೋವ ಅವನ ಮುಂದೆ ದಾಟಿಹೋಗ್ತಾ ಮಾಡಿದ ಪ್ರಕಟಣೆ ಏನಂದ್ರೆ “ಯೆಹೋವ, ಯೆಹೋವ, ಕರುಣೆ+ ಮತ್ತು ಕನಿಕರ ಇರೋ+ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ,+ ಯಾವಾಗ್ಲೂ ಸತ್ಯವಂತ*+ ಆಗಿರ್ತಾನೆ. 7 ಶಾಶ್ವತ ಪ್ರೀತಿನ ಸಾವಿರಾರು ಪೀಳಿಗೆ ಜನ್ರಿಗೆ ತೋರಿಸ್ತಾನೆ,+ ತಪ್ಪು ಅಪರಾಧ* ಪಾಪಗಳನ್ನ ಕ್ಷಮಿಸ್ತಾನೆ,+ ಆದ್ರೆ ಕೆಟ್ಟವರಿಗೆ ಶಿಕ್ಷೆ ಕೊಡದೆ ಬಿಡಲ್ಲ.+ ತಂದೆಗಳು ಮಾಡಿದ ಪಾಪಕ್ಕೆ ಅವರ ಮಕ್ಕಳ ಮೇಲೆ, ಮೊಮ್ಮಕ್ಕಳ ಮೇಲೆ, ಮರಿಮೊಮ್ಮಕ್ಕಳ ಮೇಲೆ ಶಿಕ್ಷೆ ಬರೋ ಹಾಗೆ ನಾನು ಮಾಡ್ತೀನಿ.”+
-
-
ಧರ್ಮೋಪದೇಶಕಾಂಡ 7:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ನಿಮ್ಮ ದೇವರಾದ ಯೆಹೋವ ಸತ್ಯ ದೇವರು, ನಂಬಿಗಸ್ತ ದೇವರು ಅಂತ ನಿಮಗೆ ಚೆನ್ನಾಗಿ ಗೊತ್ತು. ಆತನನ್ನ ಪ್ರೀತಿಸಿ ಆತನ ಆಜ್ಞೆಗಳ ಪ್ರಕಾರ ನಡಿಯೋರಿಗೆ ಸಾವಿರಾರು ಪೀಳಿಗೆಗಳ ತನಕ ಶಾಶ್ವತ ಪ್ರೀತಿ ತೋರಿಸ್ತಾನೆ, ಅವ್ರ ಜೊತೆ ತನ್ನ ಒಪ್ಪಂದದ ಪ್ರಕಾರನೇ ನಡ್ಕೊಳ್ತಾನೆ ಅಂತಾನೂ ನಿಮಗೆ ಗೊತ್ತು.+
-