16 ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.*+ ಜನ್ರಿಗೆ ಕಲಿಸೋಕೆ,+ ತಪ್ಪನ್ನ ತೋರಿಸೋಕೆ, ಎಲ್ಲ ವಿಷ್ಯವನ್ನ ಸರಿಮಾಡೋಕೆ, ದೇವರ ಆಲೋಚನೆ ಪ್ರಕಾರ ನಮ್ಮ ಆಲೋಚನೆಗಳನ್ನ ತಿದ್ದೋಕೆ ಅದು ಸಹಾಯ ಮಾಡುತ್ತೆ.+17 ಇದ್ರಿಂದ ದೇವರ ಸೇವಕನಿಗೆ ಯಾವಾಗ್ಲೂ ಒಳ್ಳೇ ಕೆಲಸಗಳನ್ನ ಮಾಡೋಕೆ ಸಾಮರ್ಥ್ಯ ಸಿಗುತ್ತೆ.
19 ಹಾಗಾಗಿ ದೇವರು ಹೇಳಿರೋ ಮಾತೆಲ್ಲ ನಿಜ ಆಗುತ್ತೆ ಅಂತ ನಮಗೆ ಪೂರ್ತಿ ನಂಬಿಕೆ ಬಂತು. ಆ ಎಲ್ಲ ಮಾತಿಗೆ ಗಮನ ಕೊಟ್ಟು ನೀವು ಒಳ್ಳೇ ಕೆಲಸ ಮಾಡ್ತಾ ಇದ್ದೀರ. ಯಾಕಂದ್ರೆ (ಎಲ್ಲಿ ತನಕ ಕತ್ತಲೆ ಹೋಗಿ ನಸುಕಿನ ನಕ್ಷತ್ರ+ ಬರಲ್ವೋ ಅಲ್ಲಿ ತನಕ) ಕತ್ತಲೆ ಇರೋ ಜಾಗದಲ್ಲಿ ಬೆಳಗೋ ದೀಪದ+ ತರ ಆ ಮಾತುಗಳು ನಿಮ್ಮ ಹೃದಯದಲ್ಲಿ ಬೆಳಗ್ತಾ ಇರುತ್ತೆ.