ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೆಹೆಮೀಯ 4:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಆಗ ನಾನು “ನಮ್ಮ ದೇವರೇ, ನೋಡು ಈ ಜನ ಹೇಗೆ ನಮಗೆ ಅವಮಾನ ಮಾಡ್ತಿದ್ದಾರೆ.+ ಅದೇ ತರ ಅವ್ರಿಗೂ ಬೇರೆಯವರು ಅವಮಾನ ಮಾಡೋ ತರ ಆಗ್ಲಿ.+ ಕೊಳ್ಳೆ ಹೊಡೆದ ವಸ್ತುವಿನ ಹಾಗೆ ಅವರು ಬೇರೆ ದೇಶಕ್ಕೆ ಕೈದಿಗಳಾಗಿ ಹೋಗೋ ತರ ಮಾಡು.

  • ನೆಹೆಮೀಯ 6:15, 16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಎಲೂಲ್‌* ತಿಂಗಳ 25ನೇ ದಿನ ಗೋಡೆ ಕೆಲಸ ಪೂರ್ತಿ ಆಯ್ತು. ಕಟ್ಟಿ ಮುಗಿಸೋಕೆ 52 ದಿನ ಹಿಡಿತು.

      16 ನಮ್ಮ ಶತ್ರುಗಳೆಲ್ಲ ಈ ವಿಷ್ಯ ಕೇಳಿದಾಗ, ನಮ್ಮ ಅಕ್ಕಪಕ್ಕದ ದೇಶಗಳ ಜನ ಇದನ್ನ ನೋಡಿದಾಗ ಅವ್ರಿಗೆ ತುಂಬ ನಾಚಿಕೆ ಆಯ್ತು.*+ ಈ ಕೆಲಸವನ್ನ ನಮ್ಮ ದೇವರ ಸಹಾಯದಿಂದಾನೇ ಮಾಡಿದ್ದೀವಿ ಅಂತ ಅವ್ರಿಗೆ ಗೊತ್ತಾಯ್ತು.

  • ಎಸ್ತೇರ್‌ 6:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನಡೆದ ವಿಷ್ಯನ್ನೆಲ್ಲ ಹಾಮಾನ ತನ್ನ ಹೆಂಡತಿ ಜೆರೆಷಳಿಗೆ,+ ತನ್ನ ಸ್ನೇಹಿತರಿಗೆ ಹೇಳಿದ. ಆಗ ಅವನ ಸಲಹೆಗಾರರು,* ಅವನ ಹೆಂಡತಿ “ಇವತ್ತು ನೀನು ತಲೆ ತಗ್ಗಿಸೋ ತರ ಮಾಡಿದ ಆ ಮೊರ್ದೆಕೈ ಒಬ್ಬ ಯೆಹೂದಿ ಆಗಿರೋದ್ರಿಂದ ನೀನು ಅವನ ಮೇಲೆ ಗೆಲುವು ಸಾಧಿಸೋಕೆ ಆಗಲ್ಲ. ನೀನು ಖಂಡಿತ ಅವನ ಮುಂದೆ ಸೋತು ಹೋಗ್ತೀಯ” ಅಂದ್ರು.

  • ಎಸ್ತೇರ್‌ 9:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಯೆಹೂದ್ಯರು ತಮ್ಮ ಶತ್ರುಗಳನ್ನೆಲ್ಲ ಕತ್ತಿಯಿಂದ ಕೊಂದು ಪೂರ್ತಿ ನಾಶಮಾಡಿದ್ರು. ತಮ್ಮನ್ನ ದ್ವೇಷಿಸ್ತಿದ್ದ ಜನ್ರಿಗೆ ಇಷ್ಟಬಂದ ಹಾಗೆ ಮಾಡಿದ್ರು.+

  • ಕೀರ್ತನೆ 137:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಯೆಹೋವನೇ, ನೆನಪಿಸ್ಕೊ!

      ಯೆರೂಸಲೇಮ್‌ ಬಿದ್ದುಹೋಗೋ ದಿನ ಎದೋಮ್ಯರು,

      “ಅದನ್ನ ಕೆಡವಿಹಾಕಿ! ಅದ್ರ ಅಸ್ತಿವಾರದ ಸಮೇತ ಅದನ್ನ ಬೀಳಿಸಿ!”+ ಅಂದಿದ್ದನ್ನ ನೆನಪಿಸ್ಕೊ.

  • ಜೆಕರ್ಯ 12:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಆ ದಿನ ನಾನು ಯೆರೂಸಲೇಮನ್ನ ಎಲ್ಲ ಜನ್ರಿಗೂ ಒಂದು ಭಾರವಾದ ಕಲ್ಲಿನ ತರ ಮಾಡ್ತೀನಿ. ಖಂಡಿತ ಅದನ್ನ ಹೊರೋ ಜನ್ರಿಗೆಲ್ಲ ತುಂಬ ಗಾಯ ಆಗುತ್ತೆ.+ ಭೂಮಿಯಲ್ಲಿರೋ ಎಲ್ಲ ರಾಷ್ಟ್ರಗಳು ಅದ್ರ ವಿರುದ್ಧ ಒಟ್ಟುಸೇರುತ್ತೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ