3 “ನಾನು ಬೇರೆಬೇರೆ ದೇಶಗಳಿಗೆ ಚದರಿಸಿಬಿಟ್ಟ ನನ್ನ ಕುರಿಗಳಲ್ಲಿ ಉಳಿದವುಗಳನ್ನ ಆ ಎಲ್ಲ ದೇಶಗಳಿಂದ ಒಟ್ಟುಸೇರಿಸ್ತೀನಿ.+ ಅವುಗಳ ಹುಲ್ಲುಗಾವಲಿಗೆ ವಾಪಸ್ ಕರ್ಕೊಂಡು ಬರ್ತಿನಿ.+ ಅವುಗಳ ಸಂತಾನ ಬೆಳೆದು ಅವುಗಳ ಸಂಖ್ಯೆ ಜಾಸ್ತಿ ಆಗುತ್ತೆ.+
12 ಚೆಲ್ಲಾಪಿಲ್ಲಿ ಆಗಿರೋ ಕುರಿಗಳನ್ನ ಹುಡುಕಿ ಅವನ್ನ ಕರ್ಕೊಂಡು ಬಂದು ಒಬ್ಬ ಕುರುಬನ ತರ ನಾನು ನನ್ನ ಕುರಿಗಳ ಆರೈಕೆ ಮಾಡ್ತೀನಿ.+ ಮೋಡ ಮುಚ್ಚಿ ಕಾರ್ಗತ್ತಲು ಕವಿದ ದಿನ+ ಅವು ಎಲ್ಲೆಲ್ಲ ಚೆಲ್ಲಾಪಿಲ್ಲಿ ಆದ್ವೋ ಆ ಜಾಗಗಳಿಂದ ನಾನು ಅವುಗಳನ್ನ ಕಾಪಾಡಿ ಕರ್ಕೊಂಡು ಬರ್ತಿನಿ.