21 ತಕ್ಷಣ ದಾನಿಯೇಲ ರಾಜನಿಗೆ “ರಾಜ, ಚಿರಂಜೀವಿಯಾಗಿರು. 22 ನನ್ನ ದೇವರು ತನ್ನ ದೂತರನ್ನ ಕಳಿಸಿ ಸಿಂಹಗಳ ಬಾಯಿ ಮುಚ್ಚಿದನು.+ ಅವುಗಳು ನನಗೆ ಏನೂ ಮಾಡಿಲ್ಲ.+ ಯಾಕಂದ್ರೆ ನಾನು ಆತನ ಮುಂದೆ ತಪ್ಪು ಮಾಡಿಲ್ಲ. ಅಷ್ಟೇ ಅಲ್ಲ, ನಿನ್ನ ವಿರುದ್ಧನೂ ತಪ್ಪು ಮಾಡಿಲ್ಲ” ಅಂದ.
13 ಎಲ್ಲ ಜನ್ರಿಗೆ ಕಷ್ಟಗಳು* ಬರೋ ಹಾಗೇ ನಿಮಗೂ ಕಷ್ಟ ಬಂದಿದೆ.+ ಆದ್ರೆ ದೇವರು ನಂಬಿಗಸ್ತನು, ನಿಮಗೆ ಸಹಿಸ್ಕೊಳ್ಳೋಕೆ ಆಗದೇ ಇರುವಷ್ಟರ ಮಟ್ಟಿಗೆ ಕಷ್ಟ ಬರೋಕೆ ಆತನು ಬಿಡಲ್ಲ.+ ಕಷ್ಟ ಬಂದಾಗ ಅದನ್ನ ನೀವು ಸಹಿಸ್ಕೊಳ್ಳೋಕೆ ಬೇಕಾದ ಸಹಾಯವನ್ನೂ ಆತನು ಕೊಡ್ತಾನೆ.+