5 ಈ ದೇಶ ನಿಮಗೆ ಆಸ್ತಿಯಾಗಿ ಸಿಗ್ತಿರೋದು ನೀವು ತುಂಬ ನೀತಿವಂತರು, ಪ್ರಾಮಾಣಿಕ ಜನ್ರು ಅಂತಲ್ಲ. ಆ ಜನ್ರು ಕೆಟ್ಟವರು ಆಗಿರೋದ್ರಿಂದ ನಿಮ್ಮ ದೇವರಾದ ಯೆಹೋವ ಆ ಜನಾಂಗಗಳನ್ನ ನಿಮ್ಮ ಎದುರಿಂದ ಓಡಿಸ್ತಿದ್ದಾನೆ.+ ಅಷ್ಟೇ ಅಲ್ಲ ನಿಮ್ಮ ಪೂರ್ವಜರಾದ ಅಬ್ರಹಾಮ,+ ಇಸಾಕ,+ ಯಾಕೋಬರಿಗೆ+ ಕೊಟ್ಟ ಮಾತನ್ನ ಯೆಹೋವ ನೆರವೇರಿಸಬೇಕು ಅಂತಿದ್ದಾನೆ.