-
ಆದಿಕಾಂಡ 39:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಸ್ವಲ್ಪ ಸಮಯ ಆದ್ಮೇಲೆ ಧಣಿಯ ಹೆಂಡತಿ ಯೋಸೇಫನ ಮೇಲೆ ಕಣ್ಣುಹಾಕೋಕೆ ಶುರುಮಾಡಿದಳು. ಅಲ್ಲದೆ ಅವನಿಗೆ “ಬಾ, ನನ್ನ ಜೊತೆ ಮಲಗು” ಅಂತ ಕರಿತಿದ್ದಳು. 8 ಆದ್ರೆ ಅವನು ಅದಕ್ಕೆ ಒಪ್ಪದೆ ಅವಳಿಗೆ “ನೋಡು, ನನ್ನ ಧಣಿ ತನಗಿರೋ ಎಲ್ಲವನ್ನ ನನ್ನ ಕೈಗೆ ಒಪ್ಪಿಸಿದ್ದಾನೆ. ಅವನು ಯಾವತ್ತೂ ಯಾವುದರ ಬಗ್ಗೆನೂ ನನ್ನಿಂದ ಲೆಕ್ಕ ಕೇಳಲ್ಲ. ನನ್ನ ಮೇಲೆ ಅವನಿಗೆ ಅಷ್ಟು ನಂಬಿಕೆ ಇದೆ.
-
-
ಧರ್ಮೋಪದೇಶಕಾಂಡ 13:6-8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ನಿಮ್ಮ ಒಡಹುಟ್ಟಿದ ಅಣ್ಣತಮ್ಮ ಆಗ್ಲಿ ಮಗಮಗಳು ಆಗ್ಲಿ ನೀವು ತುಂಬ ಪ್ರೀತಿಸೋ ನಿಮ್ಮ ಹೆಂಡತಿ ಆಗ್ಲಿ ನಿಮ್ಮ ಆಪ್ತ ಸ್ನೇಹಿತ ಆಗ್ಲಿ ಗುಟ್ಟಾಗಿ ನಿಮಗೆ ‘ಬಾ, ನಾವು ಬೇರೆ ದೇವರುಗಳನ್ನ ಆರಾಧನೆ ಮಾಡೋಣ’ + ಅಂತ ಹೇಳಿ ನಿಮಗಾಗ್ಲಿ ನಿಮ್ಮ ಪೂರ್ವಜರಿಗಾಗ್ಲಿ ಗೊತ್ತಿಲ್ಲದ ದೇವರುಗಳನ್ನ ಆರಾಧಿಸೋ ತರ ನಿಮ್ಮನ್ನ ಮರಳು ಮಾಡೋಕೆ ಪ್ರಯತ್ನಿಸಿದ್ರೆ, 7 ನಿಮ್ಮ ಹತ್ರದಲ್ಲಿ, ದೂರದಲ್ಲಿ ಅಥವಾ ಭೂಮಿಯ ಯಾವುದೇ ಮೂಲೆಯಲ್ಲಿ ವಾಸಿಸೋ ಜನಾಂಗಗಳ ದೇವರುಗಳ ಸೇವೆ ಮಾಡೋಣ ಅಂತ ಹೇಳಿದ್ರೆ 8 ನೀವು ಒಪ್ಪಬಾರದು, ಅವನು ಹೇಳಿದ ತರ ಮಾಡಬಾರದು.+ ಅವನಿಗೆ ದಯೆ, ಅನುಕಂಪ ತೋರಿಸಬಾರದು, ಕಾಪಾಡಬಾರದು.
-