6 ಅವನು ತನ್ನ ಗಂಡಸ್ರಿಗೆ “ನಾನು ಈ ರೀತಿ ನನ್ನ ಯಜಮಾನನಿಗೆ ಮಾಡಬಾರದಾಗಿತ್ತು. ಯಾಕಂದ್ರೆ ಅವನು ಯೆಹೋವನ ಅಭಿಷಿಕ್ತ. ಯೆಹೋವನ ಅಭಿಷಿಕ್ತನಿಗೆ+ ನಾನು ಹಾನಿ ಮಾಡಿದ್ರೆ ಯೆಹೋವ ಅದನ್ನ ಖಂಡಿತ ಒಪ್ಪಲ್ಲ” ಅಂದ. 7 ಈ ಮಾತುಗಳನ್ನ ಹೇಳಿ ದಾವೀದ ತನ್ನ ಗಂಡಸ್ರನ್ನ ತಡೆದ, ಸೌಲನ ಮೇಲೆ ಅವರು ದಾಳಿ ಮಾಡದ ಹಾಗೆ ನೋಡ್ಕೊಂಡ. ಇತ್ತ ಕಡೆ ಸೌಲ ಗವಿಯಿಂದ ಎದ್ದು ತನ್ನ ದಾರಿಹಿಡಿದ.