-
1 ಸಮುವೇಲ 15:13-15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಕೊನೆಗೂ ಸಮುವೇಲ ಸೌಲನನ್ನ ಭೇಟಿಯಾದ. ಆಗ ಸೌಲ “ಯೆಹೋವ ನಿನ್ನನ್ನ ಆಶೀರ್ವದಿಸ್ಲಿ. ಯೆಹೋವ ನನಗೆ ಹೇಳಿದ ಹಾಗೇ ನಾನು ಮಾಡಿದ್ದೀನಿ” ಅಂದ. 14 ಆದ್ರೆ ಸಮುವೇಲ “ಹಾಗಾದ್ರೆ ನನ್ನ ಕಿವಿಗೆ ಬೀಳ್ತಿರೋ ಕುರಿಗಳ ಮತ್ತು ದನಗಳ ಸದ್ದು ಎಲ್ಲಿಂದ?”+ ಅಂತ ಕೇಳಿದ. 15 ಅದಕ್ಕೆ ಸೌಲ “ಜನ ಅವುಗಳನ್ನ ಅಮಾಲೇಕ್ಯರಿಂದ ತಗೊಂಡು ಬಂದಿದ್ದಾರೆ. ನಿನ್ನ ದೇವರಾದ ಯೆಹೋವನಿಗೆ ಬಲಿಯಾಗಿ ಅರ್ಪಿಸೋಕೆ ಆಡುಕುರಿಗಳಲ್ಲಿ ದನಕರುಗಳಲ್ಲಿ ಒಳ್ಳೇದ್ದನ್ನ ನಾಶ ಮಾಡದೆ* ಉಳಿಸಿದ್ದಾರೆ. ಆದ್ರೆ ಬೇರೆಲ್ಲವನ್ನ ನಾವು ಸಂಪೂರ್ಣ ನಾಶ ಮಾಡಿದ್ವಿ” ಅಂದ.
-