-
ಧರ್ಮೋಪದೇಶಕಾಂಡ 28:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ನಾನು ಇವತ್ತು ನಿಮಗೆ ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ, ನಿಯಮಗಳನ್ನ ನೀವು ಪಾಲಿಸದೆ ಹೋದ್ರೆ, ದೇವರ ಮಾತನ್ನ ಕೇಳದೇ ಹೋದ್ರೆ ನಾನು ನಿಮಗೆ ಹೇಳೋ ಎಲ್ಲ ಶಾಪಗಳು ನಿಮಗೆ ಬರುತ್ತೆ. ಅದ್ರಿಂದ ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ.+
-
-
ಯೆಹೋಶುವ 7:24, 25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಯೆಹೋಶುವ ಮತ್ತೆ ಎಲ್ಲ ಇಸ್ರಾಯೇಲ್ಯರು ಜೆರಹನ ಮಗ ಆಕಾನನನ್ನ+ ಬೆಳ್ಳಿಯನ್ನ ವಿಶೇಷ ಬಟ್ಟೆಯನ್ನ ಬಂಗಾರದ ಗಟ್ಟಿಯನ್ನ+ ಜೊತೆಗೆ ಅವನ ಮಕ್ಕಳನ್ನ ಹೋರಿ, ಕತ್ತೆ, ಆಡುಕುರಿಗಳನ್ನ ಡೇರೆಯನ್ನ ಅವನಿಗೆ ಸೇರಿದ ಎಲ್ಲವನ್ನ ತಗೊಂಡು ಆಕೋರ್ ಕಣಿವೆಗೆ ಬಂದ್ರು.+ 25 ಆಮೇಲೆ ಯೆಹೋಶುವ ಆಕಾನನಿಗೆ “ನೀನು ನಮ್ಮ ಮೇಲೆ ಕಷ್ಟ ಬರೋ ಹಾಗೆ ಯಾಕೆ ಮಾಡ್ದೆ?+ ಈಗ ನೋಡು ಯೆಹೋವ ನಿನ್ನ ಮೇಲೆ ಕಷ್ಟ* ತರ್ತಾನೆ” ಅಂದ. ಹಾಗೆ ಹೇಳಿದ ಕೂಡ್ಲೇ ಎಲ್ಲ ಇಸ್ರಾಯೇಲ್ಯರು ಅವ್ರ ಮೇಲೆ ಕಲ್ಲು ಎಸೆದ್ರು.+ ಆಮೇಲೆ ಅವ್ರನ್ನ ಬೆಂಕಿಯಿಂದ ಸುಟ್ಟುಹಾಕಿದ್ರು.+ ಹೀಗೆ ಅವ್ರನ್ನ ಕೊಂದ್ರು.
-
-
ಎಸ್ತೇರ್ 9:24, 25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಯಾಕಂದ್ರೆ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನ+ ಯೆಹೂದ್ಯರನ್ನ ಸರ್ವನಾಶ ಮಾಡೋಕೆ ಸಂಚು ಮಾಡಿದ್ದ.+ ಎಲ್ಲ ಯೆಹೂದ್ಯರ ಶತ್ರುವಾಗಿದ್ದ ಅವನು ಯೆಹೂದ್ಯರನ್ನ ಹೆದರಿಸೋಕೆ, ಅವ್ರನ್ನ ನಾಶ ಮಾಡೋಕೆ ಪೂರನ್ನ ಅಂದ್ರೆ ಚೀಟನ್ನ ಹಾಕಿಸಿದ್ದ.+ 25 ಆದ್ರೆ ರಾಜನ ಮುಂದೆ ಎಸ್ತೇರ್ ಬಂದಾಗ ರಾಜ “ಯೆಹೂದ್ಯರ ವಿರುದ್ಧ ಹಾಮಾನ ಮಾಡಿರೋ ಸಂಚು+ ಅವನ ತಲೆ ಮೇಲೇ ಬರಲಿ” ಅನ್ನೋ ಆಜ್ಞೆ ಬರೆಸಿದ.+ ಆಗ ಹಾಮಾನನನ್ನ, ಅವನ ಗಂಡು ಮಕ್ಕಳನ್ನ ಕಂಬಕ್ಕೆ ನೇತುಹಾಕಿದ್ರು.+
-