2 “ನಾನು ಮಲಗಿದ್ರೂ ನನ್ನ ಹೃದಯ ಎಚ್ಚರವಾಗಿದೆ.+
ಹಾಂ... ನನ್ನ ಪ್ರಿಯತಮ ಬಾಗಿಲು ತಟ್ತಿದ್ದಾನೆ.
‘ನನ್ನ ಪ್ರೀತಿಯೇ, ನನ್ನ ಪ್ರಾಣಸಖಿಯೇ, ಬಾಗಿಲು ತೆರಿ,
ಲೋಪದೋಷ ಇಲ್ಲದ ನನ್ನ ಸಖಿಯೇ, ನನ್ನ ಪಾರಿವಾಳವೇ, ಬಾಗಿಲು ತೆರಿ!
ಇಬ್ಬನಿಯಿಂದ ನನ್ನ ತಲೆ ನೆನೆದಿದೆ,
ರಾತ್ರಿ ಮಂಜಿನಿಂದ ನನ್ನ ತಲೆಗೂದಲು ತೇವವಾಗಿದೆ.’+