4 ಅವ್ರ ಮೂರ್ತಿಗಳನ್ನ ಬೆಳ್ಳಿಬಂಗಾರದಿಂದ ಮಾಡಿದ್ದಾರೆ,
ಅವನ್ನ ಮಾಡಿರೋದು ಅವ್ರ ಕೈಗಳೇ.+
5 ಅವಕ್ಕೆ ಬಾಯಿದ್ರೂ ಮಾತಾಡೋಕೆ ಆಗಲ್ಲ.+
ಕಣ್ಣಿದ್ರೂ ನೋಡೋಕೆ ಆಗಲ್ಲ,
6 ಕಿವಿ ಇದ್ರೂ ಕೇಳಿಸ್ಕೊಳ್ಳೋಕೆ ಆಗಲ್ಲ,
ಮೂಗಿದ್ರೂ ಮೂಸಲ್ಲ.
7 ಕೈ ಇದ್ರೂ ಮುಟ್ಟಲ್ಲ,
ಕಾಲಿದ್ರೂ ನಡಿಯಲ್ಲ.+
ಗಂಟಲಿಂದ ಒಂದು ಶಬ್ದನೂ ಹೊರಗೆ ಬರಲ್ಲ.+
8 ಅವನ್ನ ಮಾಡೋರೂ ಅವುಗಳ ಮೇಲೆ ಭರವಸೆ ಇಡೋರೂ ಅವುಗಳ ತರಾನೇ ಆಗ್ತಾರೆ.+