-
1 ಅರಸು 21:20, 21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಆಗ ಅಹಾಬ ಎಲೀಯನಿಗೆ “ನನ್ನ ಶತ್ರು!+ ನೀನು ನನ್ನ ತಪ್ಪನ್ನ ಕಂಡುಹಿಡಿದುಬಿಟ್ಟಿಯಾ?” ಅಂತ ಕೇಳಿದ. ಅದಕ್ಕೆ ಎಲೀಯ “ಹೌದು, ನಾನು ಕಂಡುಹಿಡಿದೆ. ದೇವರು ನಿನಗೆ ಹೀಗೆ ಹೇಳಿದ್ದಾನೆ: ‘ನೀನು ಯೆಹೋವನಾದ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನ ಮಾಡಬೇಕು ಅಂತ ತೀರ್ಮಾನ ಮಾಡಿರೋದ್ರಿಂದ,*+ 21 ನಾನು ನಿನ್ನ ಮೇಲೆ ಕಷ್ಟ ತರ್ತೀನಿ. ಇಸ್ರಾಯೇಲಿನ ನಿಸ್ಸಹಾಯಕರನ್ನ, ಬಲಹೀನರನ್ನ ಸೇರಿಸಿ ನಿನ್ನ ಮನೆಯಲ್ಲಿರೋ ಎಲ್ಲ ಗಂಡಸ್ರನ್ನ ನಾನು ನಾಶ ಮಾಡಿಬಿಡ್ತೀನಿ.+
-
-
2 ಅರಸು 10:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಇದ್ರಿಂದ ಯೆಹೋವ ಅಹಾಬನ ಮನೆತನಕ್ಕೆ ಕೊಟ್ಟ ಶಿಕ್ಷೆ, ಆ ಮನೆತನದ ವಿರುದ್ಧ ಯೆಹೋವ ಹೇಳಿದ ಮಾತುಗಳು ಒಂದೂ ತಪ್ಪದೆ ಎಲ್ಲ ನಿಜ ಆಯ್ತು ಅಂತ ನೀವು ಚೆನ್ನಾಗಿ ತಿಳ್ಕೊಳ್ಳಿ.+ ತನ್ನ ಸೇವಕ ಎಲೀಯನ ಮೂಲಕ ಯೆಹೋವ ಏನು ಹೇಳಿದ್ದನೋ ಅದನ್ನೇ ಮಾಡಿದ್ದಾನೆ”+ ಅಂದ. 11 ಅಷ್ಟೇ ಅಲ್ಲ ಇಜ್ರೇಲಿನಲ್ಲಿ ಉಳಿದಿದ್ದ ಅಹಾಬನ ಮನೆತನದ ಎಲ್ರನ್ನ ಯೇಹು ಕೊಂದು ಹಾಕಿದ. ಜೊತೆಗೆ ಅಹಾಬನ ಎಲ್ಲ ಪ್ರಮುಖರನ್ನ, ಸ್ನೇಹಿತರನ್ನ, ಪುರೋಹಿತರನ್ನ+ ಹೀಗೆ ಒಬ್ರನ್ನೂ ಬಿಡದೆ ಎಲ್ರನ್ನ ಕೊಂದುಹಾಕಿದ.+
-
-
ಯೆರೆಮೀಯ 22:30ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಯಾಕಂದ್ರೆ ಇವನ ವಂಶದವರಲ್ಲಿ ಯಾರೂ ಕೂಡ ದಾವೀದನ ಸಿಂಹಾಸನದಲ್ಲಿ ಕೂತ್ಕೊಂಡು ಮತ್ತೆ ಯೆಹೂದವನ್ನ ಆಳಲ್ಲ.’”+
-