-
1 ಅರಸು 18:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಆಗ ಅವರು ಒಂದು ಹೋರಿ ತಗೊಂಡು ಅದನ್ನ ಬಲಿಗಾಗಿ ತಯಾರಿಸಿದ್ರು. ಆಮೇಲೆ ಅವರು ಬೆಳಿಗ್ಗೆಯಿಂದ ಹಿಡಿದು ಮಧ್ಯಾಹ್ನದ ತನಕ ಬಾಳನ ಹೆಸ್ರನ್ನ ಕೂಗ್ತಾ “ಬಾಳನೇ ನಮಗೆ ಉತ್ರ ಕೊಡು!” ಅಂತ ಹೇಳ್ತಾ ಇದ್ರು. ಆದ್ರೆ ಅವ್ರಿಗೆ ಯಾವ ಸ್ವರನೂ ಕೇಳಿಸಲಿಲ್ಲ, ಯಾವ ಉತ್ತರನೂ ಬರಲಿಲ್ಲ.+ ಆದ್ರೂ ಅವರು ಮಾಡಿದ್ದ ಯಜ್ಞವೇದಿ ಸುತ್ತ ಕುಣಿಯುತ್ತಾ ನೆಗೆಯುತ್ತಾ ಇದ್ರು.
-
-
ಯೆಶಾಯ 37:37, 38ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
37 ಹಾಗಾಗಿ ಅಶ್ಶೂರ್ಯರ ರಾಜ ಸನ್ಹೇರೀಬ ಅಲ್ಲಿಂದ ನಿನೆವೆಗೆ+ ವಾಪಸ್ ಹೋಗಿ ಅಲ್ಲೇ ಇದ್ದ.+ 38 ಒಂದಿನ ಅವನು ದೇವಸ್ಥಾನಕ್ಕೆ ಹೋಗಿ ತನ್ನ ದೇವರಾದ ನಿಸ್ರೋಕನಿಗೆ ಅಡ್ಡಬಿದ್ದು ನಮಸ್ಕಾರ ಮಾಡ್ತಿದ್ದಾಗ ಅವನ ಮಕ್ಕಳಾದ ಅದ್ರಮ್ಮೆಲೆಕ ಮತ್ತು ಸರೆಚೆರ ಅವನನ್ನ ಕತ್ತಿಯಿಂದ ಸಾಯಿಸಿದ್ರು.+ ಆಮೇಲೆ ಅವರು ತಪ್ಪಿಸ್ಕೊಂಡು ಅರರಾಟ್+ ದೇಶಕ್ಕೆ ಓಡಿಹೋದ್ರು. ಸನ್ಹೇರೀಬನ ನಂತ್ರ ಅವನ ಮಗ ಏಸರ್-ಹದ್ದೋನ+ ರಾಜನಾದ.
-